ನಾಳೆ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ಹಿನ್ನೆಲೆ: ಇಂದು ಮೈಸೂರಿಗೆ ಸಿಎಂ ಬಿಎಸ್ ಯಡಿಯೂರಪ್ಪ….

Promotion

ಮೈಸೂರು,ಅ,7,2019(www.justkannada.in):  ನಾಳೆ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿಗೆ ಚಾಲನೆ ನೀಡುವ ಹಿನ್ನೆಲೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಲಿದ್ದಾರೆ.

ಇಂದು ಸಂಜೆ ವೇಳೆಗೆ ಮೈಸೂರಿಗೆ ಆಗಮಿಸಲಿರುವ  ಸಿಎಂ  ಬಿಎಸ್  ಯಡಿಯೂರಪ್ಪ, ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.  ಬಳಿಕ ನಾಳೆ ಬೆಳಗ್ಗೆ ಸುತ್ತೂರು ಮಠದಲ್ಲಿ ಉಪಹಾರ ಕೂಟದಲ್ಲಿ ಸಿಎಂ ಬಿಎಸ್ ವೈ ಭಾಗಿಯಾಗಲಿದ್ದಾರೆ.

ಇದಾದ ನಂತರ ಸಿಎಂ ಬಿಎಸ್ ವೈ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದು ತದ ನಂತರ ಕ್ಯಾಪ್ಟನ್ ಅರ್ಜುನ ಹೊತ್ತು ಬರುವ ಅಂಬಾರಿಯಲ್ಲಿನ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

Key words: tomorrow-mysore dasara- jumbo ride-cm bs yeddyurappa