ಟೊಮೆಟೊ ಸೋಂಕು ಸಾಂಕ್ರಾಮಿಕ ರೋಗ ಅಲ್ಲ: ಆತಂಕ ಬೇಡ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

Promotion

ಬೆಂಗಳೂರು,ಮೇ,12,2022(www.justkannada.in):  ಕೊರೊನಾ, ಡೆಲ್ಟಾ ಆಯ್ತು ಇದೀಗ ರಾಜ್ಯಕ್ಕೆ ಟೊಮೆಟೋ ಸೋಂಕು ಭೀತಿ ಎದುರಾಗಿದ್ದು ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತಿದೆ. ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸೋಂಕು ತಡೆಯಲು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುತ್ತಿದೆ.

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್,  ಟೊಮೆಟೊ ಸೋಂಕು ಇದು ಹೊಸದಾಗಿ ಬಂದಿರುವ ಸೋಂಕು ಅಲ್ಲ. ಕೇರಳದಲ್ಲಿ ಹಿಂದೆಯೇ ಕಾಣಿಸಿಕೊಂಡಿದೆ. ಟಮೊಟೊ ಸೋಂಕು ಸಾಂಕ್ರಾಮಿಕ ರೋಗ ಅಲ್ಲ. ಕೊರೊನಾ ಸೋಂಕಿಗೂ ಟೊಮೊಟೊ ಸೋಂಕಿಗ ಸಂಬಂಧ ಇಲ್ಲ. ಕೇರಳ ಬಿಟ್ಟು ಬೇರೆ ಕಡೆ ಒಂದು ಪ್ರಕರಣಗಳಿಲ್ಲ.ಈ ಸೋಂಕಿನ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.

ಮಂಗಳೂರು, ಉಡುಪಿ, ಚಾಮರಾಜನಗರ ಮೈಸೂರು  ಗಡಿಭಾಗಗಳಲ್ಲಿ ಆಲರ್ಟ್ ಆಗಿದ್ದು,  ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ಎಚ್ಚರವಹಿಸಿ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

Key words: Tomato-infection – not – infectious- disease-Health Minister -Dr K Sudhakar.