ಇಂದು ಮತ್ತು ನಾಳೆ ಕೊಡಗು ಲಾಕ್ ಡೌನ್….

Promotion

ಕೊಡಗು,ಜು,18,2020(www.justkannada.in): ದಿನೇ ದಿನೇ ಕೊರೋನಾ ಸೋಂಕು ಎಲ್ಲಡೆ ಹೆಚ್ಚುತ್ತಿರುವ ಹಿನ್ನೆಲೆ  ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲಾಗಿದೆ. ಈ ಮಧ್ಯೆ ಕೊಡಗಿನಲ್ಲೂ ಕೊರೋನಾ ತಡೆಗಾಗಿ ಇಂದು ಮತ್ತೆ ನಾಳೆ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ.today-tomorrow-kodagu-lock-down-corona

ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಲಾಕ್ ಡೌನ್ ಗೆ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಈ ಹಿನ್ನೆಲೆ ಕೊಡಗು ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಲಾಕ್ ಡೌನ್ ಇರಲಿದೆ.  ಜುಲೈ 31ರ ವರೆಗೆ ಪ್ರತಿ ಶನಿವಾರ ,ಭಾನುವಾರ ಲಾಕ್ ಡೌನ್ ಗೆ ಕೊಡಗು ಜಿಲ್ಲಾಡಳಿತ ಆದೇಶ ಹೊರಡಿಸಿದೆ.today-tomorrow-kodagu-lock-down-corona

ಬೆಳಿಗ್ಗೆ ಹಾಲು ಪತ್ರಿಕೆ ಕೊಳ್ಳಲು ಮಾತ್ರ ಅವಕಾಶವಿರಲಿದ್ದು, ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಹೆಚ್ಚುತ್ತಿರುವ  ಕೊರೋನಾ ಪ್ರಕರಣ  ನಿಯಂತ್ರಣಕ್ಕೆ ಕೊಡಗು ಜಿಲ್ಲಾಡಳಿತ ಲಾಕ್ ಡೌನ್ ಮೊರೆ ಹೋಗಿದೆ.

Key words: Today – tomorrow- Kodagu – lock down-corona