Sunday, August 9, 2026

BDA Apartments

Home Cinema ನಟ, ನಿರ್ದೇಶಕ ಪ್ರೇಮ್ ತಾಯಿ ನಿಧನ

ನಟ, ನಿರ್ದೇಶಕ ಪ್ರೇಮ್ ತಾಯಿ ನಿಧನ

ಬೆಂಗಳೂರು, ಜುಲೈ 18, 2020 (www.justkannnada.in): ನಟ, ನಿರ್ದೇಶಕ ಪ್ರೇಮ್ ಅವರ ತಾಯಿ ಭಾಗ್ಯಮ್ಮ (75) ನಿಧನರಾಗಿದ್ದಾರೆ.

ಕಳೆದ ಆರು ತಿಂಗಳಿನಿಂದ ಲ್ಯುಕೇಮಿಯಾ ಕ್ಯಾನ್ಸರ್‌ನಿಂದ (ರಕ್ತ ಕ್ಯಾನ್ಸರ್‌) ಬಳಲುತ್ತಿದ್ದರು. ಬೆಂಗಳೂರಿನ ಜಯನಗರದ ಶಾಂತಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಭಾಗ್ಯಮ್ಮ ಅವರು ನಿಧನರಾದ ಸುದ್ದಿಯನ್ನು ಪ್ರೇಮ್ ಪತ್ನಿ, ನಟಿ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಭಾಗ್ಯಮ್ಮ ಮಂಡ್ಯದ ಬೆಸಗರಹಳ್ಳಿಯವರು. ಪ್ರೇಮ್ ಅವರ ಬಹುತೇಕ ಎಲ್ಲ ಸಿನಿಮಾಗಳಲ್ಲಿ ತಾಯಿ ಪ್ರೀತಿಯ ಸೆಂಟಿಮೆಂಟ್ ದೃಶ್ಯಗಳು ಸಾಮಾನ್ಯವಾಗಿದ್ದವು.