ಇಂದು ಭಾರತ-ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯ

Promotion

ಬೆಂಗಳೂರು, ಜುಲೈ 24, 2022 (www.justkannada.in): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ದ್ವಿತೀಯ ಏಕದಿನ ಪಂದ್ಯ ಇಂದು ನಡೆಯಲಿದೆ.

ಮೊದಲ ಪಂದ್ಯದಲ್ಲಿ ವಿಂಡೀಸ್ ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ ಭಾರತಕ್ಕೆ ಪಾಠ ಕಲಿಸಿದೆ. ಹೀಗಾಗಿ ಇಂದು ಗೆಲ್ಲಬೇಕಾದರೆ ಟೀಂ ಇಂಡಿಯಾಗೆ ಕೆಳ ಕ್ರಮಾಂಕದ ಬ್ಯಾಟಿಗರು ಉತ್ತಮ ಪ್ರದರ್ಶನ ನೀಡಬೇಕಿದೆ. ಜತೆಗೆ ಬೌಲರ್ ಗಳು ವಿಂಡೀಸ್ ಬ್ಯಾಟರ್ ಗಳಿಗೆ ಕಡಿವಾಣ ಹಾಕಬೇಕಿದೆ.

ಮೊದಲ ಏಕದಿನ ಪಂದ್ಯವನ್ನು ರೋಚಕವಾಗಿ ಗೆದ್ದಿದ್ದ ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸರಣಿ ಗೆದ್ದಂತೆ. ಆದರೆ ತವರಿನಲ್ಲಿ ವಿಂಡೀಸ್ ಸೋಲಿಸುವುದು ಸುಲಭವಲ್ಲ ಎಂದು ಕಳೆದ ಪಂದ್ಯದಲ್ಲೇ ಸಾಬೀತಾಗಿದೆ.

ಇಂದು ಮತ್ತೊಮ್ಮೆ ಶಿಖರ್ ಧವನ್ ಪಡೆ ಆಲ್ ರೌಂಡರ್ ಪ್ರದರ್ಶನ ನೀಡಿದರೆ ಮಾತ್ರ ಗೆಲುವು ಸಾಧ್ಯವಾಗಲಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ