ಚಾಮುಂಡಿ ಬೆಟ್ಟದಲ್ಲಿ ಆಷಾಡ ಶುಕ್ರವಾರ ಯಶಸ್ವಿ ಆಚರಣೆ: ಮೈಸೂರಿನ ಜನತೆಗೆ ಕೃತಜ್ಞತೆ ಸಲ್ಲಿಸಿದ ಸಚಿವ ಎಸ್’ಟಿಎಸ್

ಮೈಸೂರು, ಜುಲೈ 24, 2022 (www.justkannada.in): ಚಾಮುಂಡಿ ಬೆಟ್ಟದಲ್ಲಿ ಆಷಾಡ ಶುಕ್ರವಾರ ಯಶಸ್ವಿ ಆಚರಣೆ  ಹಿನ್ನೆಲೆಯಲ್ಲಿ ಮೈಸೂರಿನ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕೃತಜ್ಞತೆ ಸಲ್ಲಿಸಿದರು.

ಆಷಾಡ ಶುಕ್ರವಾರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು ಆಷಾಡ ಶುಕ್ರವಾರ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ವೇಳೆ ಯಾವುದಾದರೂ ಅಡಚಣೆ ಉಂಟಾಗಿದ್ದಲ್ಲಿ ಕ್ಷಮೆ ಯಾಚಿಸುತ್ತೇನೆ. ಈ ಬಾರಿ ಪಾಸ್ ನಿಂದ ಗೊಂದಲವಾಯ್ತು ಆದರಿಂದ ಪಾಸ್ ಕ್ಯಾನ್ಸಲ್ ಮಾಡಿದ್ದೆವು. ಇದೇ ರೀತಿ ಮುಂದಿನ ದಸರಾ ವೇಳೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥಿತವಾಗಿ ಜಿಲ್ಲಾಡಳಿತ ನಡೆಸಲಿದೆ ಎಂದು ತಿಳಿಸಿದರು.

ಎಲ್ಲಾ ಇಲಾಖೆಗಳು, ಎಲ್ಲಾ ಪಕ್ಷಗಳು ಸೇರಿದಂತೆ ಮೈಸೂರಿನ ಜನತೆ ಸಹಕಾರ ನೀಡಿದ್ದಾರೆ ಎಂದು ಚಾಮುಂಡಿಬೆಟ್ಟದಲ್ಲಿ ಸಚಿವರಾದ ಎಸ್ ಟಿ ಸೋಮಶೇಖರ್ ಹೇಳಿದರು.

ಲಾಡು ಪ್ರಸಾದ ವಿತರಣೆ ಸೇವೆ: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭಾನುವಾರ ಆಷಾಢ ಮಾಸದ ಹಿನ್ನೆಲೆಯಲ್ಲಿ  ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಚಿವರು ವೈಯಕ್ತಿಕವಾಗಿ 50 ಸಾವಿರ ಲಾಡು ಪ್ರಸಾದ್ ಮಾಡಿಸಿ, ಭಕ್ತಾಧಿಗಳಿಗೆ ಸ್ವತಃ ನಿಂತು ಪ್ರಸಾದ ವಿತರಣೆ ಮಾಡಿದರು. ದೇವರ ದರ್ಶನ ಮಾಡಿ ಬರುವ ಎಲ್ಲಾ ಭಕ್ತಾಧಿಕಾದಿಗಳಿಗೆ ಸಂಜೆವರೆಗೂ ಪ್ರಸಾದ್ ವಿತರಣೆ ನಡೆಯಲಿದೆ.

ಶಾಸಕ ಜಿ.ಟಿ.ದೇವೇಗೌಡ, ಮುಡಾ ಮಾಜಿ ಅಧ್ಯಕ್ಷಹೆಚ್.ವಿ.ರಾಜೀವ್, ಮುಖಂಡರಾದ ಶ್ರೀವತ್ಸ, ಮಂಗಳ ಸೋಮಶೇಖರ್, ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.