ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ನಲ್ಲಿ ಸಂಸತ್ ಭವನಕ್ಕೆ ಆಗಮಿಸಿದ ಟಿ.ಎಂ.ಸಿ ಸಂಸದರು.

Promotion

ನವದೆಹಲಿ. ಜುಲೈ.19.( www.justkannad.in) ಇಂದಿನಿಂದ ಸಂಸತ್ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು,  ತೈಲ ಬೆಲೆ ಏರಿಕೆ ಖಂಡಿಸಿ  ಟಿ.ಎಂ.ಸಿ. ಸಂಸದರು ಸೈಕಲ್ ಏರಿ ಸಂಸತ್ ಭವನಕ್ಕೆ ಆಗಮಿಸಿದರು. jk

ಇಂದಿನಿಂದ ಸಂಸತ್ತಿನಲ್ಲಿ ಮಳೆಗಾಲದ ಅಧಿವೇಶನ ಶುರುವಾಗಿರುವ ಹಿನ್ನಲೆ ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿರುವುದನ್ನು ಸಂಸತ್ತಿನ ಟಿ.ಎಂ.ಸಿ. ಸಂಸದರು ಒಂದು ವಿನೂತನ ಪ್ರತಿಭಟನೆ  ಮೂಲಕ ಖಂಡಿಸಿದ್ದಾರೆ.

ಇನ್ನು ಸಂಸತ್ ಭವನದಲ್ಲಿ ಮಳೆಗಾಲದ ಅಧಿವೇಶನ ಬಗ್ಗೆ  ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರು ಕರೋನ ಲಸಿಕೆಯನ್ನು ಪಡೆದುಕೊಳ್ಳಿ, ಇದರಿಂದ ಕರೋನಾ ಎದುರಿಸಲು ಶಕ್ತಿ ಲಭಿಸುತ್ತದೆ ಹಾಗೂ ಕರೋನ ವಿರುದ್ಧ ಎಲ್ಲರೂ ಜೊತೆಯಾಗಿ ಹೋರಾಟ ಮಾಡುವುದು ಸೂಕ್ತ ಎಂದರು.

ಸದನದಲ್ಲಿ ಎಲ್ಲರೂ ಕೋವಿಡ್ ನಿಯಮವನ್ನು ಪಾಲಿಸೋಣ ಹಾಗೂ ಕೋವಿಡ್ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಲಿ.  ಸಂಸದರು ಸರ್ಕಾರಕ್ಕೆ ಪ್ರಶ್ನೆಯನ್ನು ಕೇಳಲಿ ಇದಕ್ಕೆ ಸರ್ಕಾರ ಉತ್ತರ ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: TMC –MP- arrives -Parliament – Bicycle