ಕಟೀಲ್ ಪರ ಬ್ಯಾಟಿಂಗ್: ಮಂತ್ರಿಸ್ಥಾನ ತ್ಯಾಗಕ್ಕೆ ರೆಡಿ ಎಂದ ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಜುಲೈ,19,2021(www.justkannada.in):  ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು ಬಿಜೆಪಿಯಲ್ಲಿ ಭಾರಿ ಸಂಚಲನ ಮೂಡಿಸಿದೆ.jk

ಈ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ,  ಮಂತ್ರಿ ಸ್ಥಾನ ಹೋದರೆ ಹೋಗಲಿ. ಮಂತ್ರಿಸ್ಥಾನ  ಹೋದರೆ ಹೋಗಲಿ. ನಾನೇನೂ ಗೂಟ ಹೊಡ್ಕೊಂಡು ಕೂರಲು ಬಂದಿಲ್ಲ. ಅಧಿಕಾರ ಹೋದರೆ ಗೂಟ ಹೋಯ್ತು ಅಂದುಕೊಳ್ತೀನಿ. ಮಂತ್ರಿ ಸ್ಥಾನ ಇಲ್ಲಾಂದರೆ ಸಂಘಟನೆಯ ಕೆಲಸ ಮಾಡ್ತೀನಿ. ಸಂಘಟನೆಯ ಹಿರಿಯರು ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಯಡಿಯೂರಪ್ಪ ಪದಚ್ಯುತರಾಗಲಿದ್ದಾರೆ. ಈಶ್ವರಪ್ಪ, ಶೆಟ್ಟರ್ ಟೀಂ ಹೊರ ಹೋಗುತ್ತಾರೆ. ಮೂವರಲ್ಲಿ ಒಬ್ಬರು ಅಧಿಕಾರ ಹಿಡಿತಾರೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ನಾನು ಅದನ್ನ ಹೇಳಿಲ್ಲ, ಯಾರೋ ಹುಚ್ಚರು ಮಾಡಿದ್ದು, ಅದು ನಕಲಿ ಅಂತ ಕಟೀಲ್ ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಆಡಿಯೋದಲ್ಲಿರುವುದನ್ನು ಕಟೀಲ್ ಹೇಳಿಲ್ಲ, ಅವರು ಹೇಳಲು ಸಾಧ್ಯವೂ ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಪರ ಬ್ಯಾಟ್ ಬೀಸಿದರು.

ಹಾಗೆಯೇ ಅದು ನಕಲಿ ಆಡಿಯೋ ಅಂತ ಕಟೀಲ್ ಹೇಳಿದ ಮೇಲೆ ತನಿಖೆ ಮಾಡುವುದೇನೂ ಉಳಿದಿಲ್ಲ. ಆದರೆ ತನಿಖೆ ನಡೆಯಲೇಬೇಕು ಎಂದಾದರೆ ತನಿಖೆ ಆಗಲಿ  ಎಂದು ಸಚಿವ ಕೆ,ಎಸ್ ಈಶ್ವರಪ್ಪ ತಿಳಿಸಿದರು.

ಪ್ರಧಾನಿ ಮೋದಿಯವರನ್ನು ನೋಡಲು ದೆಹಲಿಗೆ ಹೋದ ಮುಖ್ಯಮಂತ್ರಿಗಳು ತಮ್ಮೊಂದಿಗೆ ಆರು ಬ್ಯಾಗ್ ಒಯ್ದಿದ್ದರು ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಏನನ್ನೋ ಪೂರೈಸಿ ಮೋದಿಯವರನ್ನು ತೃಪ್ತಿ ಮಾಡುವ ಲೆವೆಲ್ಲಿನಲ್ಲಿ ಯಡಿಯೂರಪ್ಪ ಇಲ್ಲ. ಏನನ್ನೋ ಪಡೆದು ನಡೆಯುವಷ್ಟು ಕೆಳಮಟ್ಟದಲ್ಲಿ ಮೋದಿಯವರೂ ಇಲ್ಲ ಎಂದು ಹೆಚ್.ಡಿಕೆಗೆ ಟಾಂಗ್ ನೀಡಿದರು.

ENGLISH SUMMARY….

I don’t mind if I lose my power: K.S. Eshwarappa bats for Kateel
Shivamogga, July 19, 2021 (www.justkannad.ain): An audio clipping, allegedly belonging to the BJP State President Nalin Kumar Kateel, has gone viral, causing ripples in the state BJP.
Addressing a press meet in Shivamogga regarding this audio clipping today, Rural Development Minister K.S. Eshwarappa said, “I don’t mind if I lose my power. I am not after it. If not a minister, I will work as a party member. I will carry out the responsibility which my seniors give me.”
The content of the audio clipping by Nalin Kumar Kateel is said to be as follows: Chief Minister Yediyurappa will step down as CM. Eshwarappa and Shettar will be shown the doors. One among the three will get power. Reacting to this K.S. Eshwarappa said, “Kateel has clarified that he has not said that and someone is making a prank. I also agree to it. Kateel has not told it, he is not such a kind of person.”
Keywords: K.S. Eshwarappa/ Nalin Kumar Kateel/ State BPJ President/ power/ politics

Key words: shivamogga- Minister- KS Eshwarappa -go – my -ministerial position