ಪಠ್ಯಪುಸ್ತಕದಿಂದ ಟಿಪ್ಪು ಇತಿಹಾಸ ಕೈ ಬಿಟ್ಟ ಹಿನ್ನೆಲೆ: ರಾಜ್ಯ ಸರ್ಕಾರದ ವಿರುದ್ದ ಶಾಸಕ ತನ್ವೀರ್ ಸೇಠ್ ಆಕ್ರೋಶ…

Promotion

ಮೈಸೂರು,ಜು,29,2020(www.justkannada.in): ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಇತಿಹಾಸ ಕೈ ಬಿಟ್ಟ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ದ ಶಾಸಕ ತನ್ವೀರ್ ಸೇಠ್ ಆಕ್ರೋಶ ಹೊರ ಹಾಕಿದ್ದಾರೆ.jk-logo-justkannada-logo

ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತನ್ವೀರ್ ಸೇಠ್,  ಟಿಪ್ಪು ಒಂದು ಸಮುದಾಯಕ್ಕೆ ಸೀಮಿತವಲ್ಲ. ಟಿಪ್ಪು ಮತ್ತೂ ಶೃಂಗೇರಿ ಮಠಕ್ಕೂ ಸಂಬಂಧ ಇದೆ.  ಬಡವರ ಮೇಲಿನ ಭೂ ಸುಧಾರಣೆ ಮೇಲಿನ ಪ್ರಭಾವ. ಸರಾಯಿ ನಿಷೇಧ’ ಆಡಳಿತ ವ್ಯವಸ್ಥೆಯಲ್ಲಿ ತಂದ ಸುಧಾರಣೆ. ಖಾತಾ, ಪಾಣಿ, ಸಾಕಷ್ಟು ಸುಧಾರಣೆಗಳನ್ನ ತಂದ ಹೆಗ್ಗಳಿಕೆ ಟಿಪ್ಪುವಿನದ್ದು. ಟಿಪ್ಪು ಬಗ್ಗೆ ಓದುವ ಎಲ್ಲರಿಗು ಈ‌ ನಿರ್ಣಯ ನೋವುಂಟು ಮಾಡಿದೆ.  ಬಿಜೆಪಿಯಿಂದ ಟಿಪ್ಪು ಜಯಂತಿ ನಿಲ್ಲಿಸುವ ಬಗ್ಗೆ ಗೊತ್ತಿತ್ತು. ಆದರೆ ಟಿಪ್ಪುವಿನ ಪಠ್ಯದ ಬಗ್ಗೆ‌ ನಾವು ಯೋಚಿಸಿರಲಿಲ್ಲ. ನಿಜವಾಗಿಯೂ ಬಿಜೆಪಿಯಿಂದ ಈ‌ ನಡೆ ನಾವು ಅಂದುಕೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಹೋರಾಟ ಮಾಡುವುದಕ್ಕೆ ನಮಗೆ ಸದ್ಯ ಸಮಸ್ಯೆ ಇಲ್ಲ. ಆದರೆ ಅದು ಸರಿಯಾದ ಮಾರ್ಗದಲ್ಲಿ ನಾವು ಹೋಗಿ ಹೋರಾಟ ಮಾಡುತ್ತೇವೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನು ಬರೆದಿದ್ದೇನೆ. ಬರಗೂರು ರಾಮಚಂದ್ರಪ್ಪ ಅವ್ರು ಕೂಡ ಪಠ್ಯ ತೆಗೆಯೋದು ಆಗಲ್ಲ ಎಂದಿದ್ರು. ಪಠ್ಯ ಸಮಿತಿಯ ಆದೇಶ’ ನಿರ್ಣಯಕ್ಕೆ ಬಿಜೆಪಿ ಬೆಲೆ‌ ಕೊಡ್ತಿಲ್ಲ. ಬಿಜೆಪಿ ಏಕಪಕ್ಷೀಯವಾಗಿ ಸರ್ವಾಧಿಕಾರದ ಧೋರಣೆ ತೋರುತ್ತಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಆಕ್ರೋಶ ವ್ಯಕ್ತಪಡಿಸಿದರು.tipu-history-leaving-textbook-mysore-mla-tanveer-saith-outrage-against-government

ಬಿಜೆಪಿ ಸರ್ಕಾರ ಬಂದ ಮೇಲೆ ಟಿಪ್ಪು ಹೆಸರಿನಲ್ಲಿ ರಾಜಕಾರಣ ಮಾಡಲು ಶುರು ಮಾಡಿದೆ. ಈಗಾಗಲೇ ಕೊರೋನಾದಿಂದ 30 ರಷ್ಟು ಪಾಠ ಕಡಮೆ ಮಾಡ್ತಿದೆ. ಇದರಲ್ಲಿ ಟಿಪ್ಪು ಪಠ್ಯ ತೆಗೆಯುವಂತದ್ದು ಸರಿಯಲ್ಲ. ಸರ್ಕಾರ ಟಿಪ್ಪು ಜಯಂತಿ ಮಾಡುವಾಗಲು ರಜೆ ಬೇಡ ಎಂದ ಸಮುದಾಯ ನಮ್ಮದು. ಟಿಪ್ಪು ಮೈಸೂರು ಭಾಗಕ್ಕೆ ಸಾಕಷ್ಟು ಕೊಡುಗೆ ಇದೆ. ಇವತ್ತಿಗೂ ಅವರು ಕಂಡು ಹಿಡಿದ ರಾಕೆಟ್  ನಾಸಾದಲ್ಲಿ ಪ್ರದರ್ಶನವಾಗಿದೆ. ಆದರೆ ಇತಿಹಾಸ ತಿರುಚುವ ಕೆಲಸ ಮಾಡಬೇಡಿ. ಈ ಸಂದರ್ಭದಲ್ಲಿ ರಾಜಕಾರಣ ಮಾಡೋದು ಬೇಡ. ವಿನಃಕಾರಣ ಇದಕ್ಕೆ ಬೇರೆ ಬೇರೆ ಬಣ್ಣ ಕಟ್ಟೋದು ಸರಿಯಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ’ ಬಿಜೆಪಿ ಸರ್ಕಾರ ಇದನ್ನ ಮತ್ತೊಮ್ಮೆ ಪರಿಶೀಲನೆ ನಡೆಸಲಿ ಎಂದು ತನ್ವೀರ್ ಸೇಠ್ ಸಲಹೆ ನೀಡಿದರು.

Key words: Tipu -History – Leaving – Textbook-mysore-MLA-Tanveer Saith- outrage -against – government.