ಸ್ವಂತ ಜಾಗದಲ್ಲಿ ಟಿಪ್ಪು ಪ್ರತಿಮೆ ನಿರ್ಮಿಸುತ್ತೇವೆ ಅಂದ್ರೂ ಬಿಡಲ್ಲ: ಚಲೋ ಮೈಸೂರು ಕರೆ ನೀಡುತ್ತೇವೆ- ಪ್ರಮೋದ್ ಮುತಾಲಿಕ್.

Promotion

ಶಿವಮೊಗ್ಗ,ನವೆಂಬರ್,12,2022(www.justkannada.in):  ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಣ ಖಚಿತ ಎಂದು ಹೇಳಿಕೆ ನೀಡಿದ್ಧ ಶಾಸಕ ತನ್ವೀರ್ ಸೇಠ್ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್  ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಈ ಕುರಿತು ಇಂದು ಮಾತನಾಡಿದ ಪ್ರಮೋದ್ ಮುತಾಲಿಕ್, ಸ್ವಂತ ಜಾಗದಲ್ಲಿ ಟಿಪ್ಪು ಪ್ರತಿಮೆ ನಿರ್ಮಿಸುತ್ತೇವೆ ಅಂದ್ರೂ ಬಿಡಲ್ಲ. ಚಲೋ ಮೈಸೂರು ಕರೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ತನ್ವೀರ್ ಸೇಠ್  ಹೇಳಿಕೆಯನ್ನ ಖಂಡಿಸುತ್ತೇನೆ.  ಇಸ್ಲಾಂನಲ್ಲಿ ಮೂರ್ತಿಗೆ ಅವಕಾಶವಿಲ್ಲ.  ಮುಸ್ಲೀಂ ಸಮುದಾಯದವರೇ ಇದನ್ನ ಒಪ್ಪುವುದಿಲ್ಲಅಲ್ಲಾ ಒಬ್ಬನೇ  ದೇವರು . ಅಲ್ಲಾ,  ಪೈಗಂಬರ್ ಮೂರ್ತಿ ಇಲ್ಲ. ಹೀಗಾಗಿ ತನ್ವೀರ್ ಸೇಠ್ ವಿರುದ್ದ ಫತ್ವಾ ಹೊರಡಿಸಬೆಕು. ಬಹಿಷ್ಕರಿಸಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ದೇವಸ್ಥಾನ ಭಗ್ನಗೊಳಿಸಿ ಮಸೀದಿ ಕಟ್ಟಿದವನು ಟಿಪ್ಪು. ಟಿಪ್ಪು  ಮತಾಂಧ, ಕನ್ನಡ ವಿರೋಧಿ ,ಮೋಸದಿಂದ ಮತಾಂತರ ಮಾಡಿದ ವ್ಯಕ್ತಿ. ಸ್ವಂತ ಜಾಗದಲ್ಲಿ ಪ್ರತಿಮೆ ಕಟ್ತೀವಿ ಅಂದ್ರೂ ಬಿಡಲ್ಲ. ನಿಮಗೆ ಸ್ವಂತ ಜಾಗವಿಲ್ಲ.  ಎಲ್ಲಾ ಜಾಗ ಹಿಂದೂಗಳದ್ದು ಒಂದು ವೇಳೆ ಪ್ರತಿಮೆ ನಿರ್ಮಾಣ ಮುಂದಾದರೇ ಚಲೋ ಮೈಸೂರು ಕರೆ ನೀಡುತ್ತೇವೆ ಬಾಬರಿ ಮಸೀದಿ ರೀತಿ ಧ್ವಂಸ ಮಾಡುತ್ತೇವೆ ಎಂದರು.

Key words: Tippu- statue -not -Chalo Mysore – call-Pramod Muthalik.