ಟಿಆರ್ ಎಸ್ ಪಕ್ಷದ ನಾಯಕರಿಂದ ಜನರಿಗೆ ಅನ್ಯಾಯ: ಕೆಸಿಆರ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ.

ತೆಲಂಗಾಣ,ನವೆಂಬರ್,12,2022(www.justkannada.in): ಟಿಆರ್ ಎಸ್ ಪಕ್ಷದ ನಾಯಕರು ತೆಲಂಗಾಣ ಜನರಿಗೆ ಅನ್ಯಾಯ  ಮಾಡಿದ್ದಾರೆ ಎಂದು ಕೆ.ಚಂದ್ರಶೇಖರರಾವ್  ಸರ್ಕಾರದ ವಿರುದ್ದ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.

ತೆಲಂಗಾಣದ ಬೇಗಂಪೇಟೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತೆಲಂಗಾಣ ಹೆಸರಿನಲ್ಲಿ ಅಧಿಕಾರ ಹಿಡಿದು ಮುಂದೆ ಬಂದಿದ್ದಾರೆ.  ಅಧಿಕಾರಕ್ಕೆ ಬಂದ ತಕ್ಷಣ ತೆಲಂಗಾಣವನ್ನ ಹಿಂದಕ್ಕೆ ತಳ್ಳಿದ್ದಾರೆ.  ಟಿಆರ್ ಎಸ್ ಪಕ್ಷದ ನಾಯಕರು ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದರು.Rajiv Gandhi Health university- Founding Day-Prime Minister Modi -praises -Karnataka government

ಕತ್ತಲು ಹೆಚ್ಚಾದಾಗ  ಕಮಲ ಹರಳುತ್ತದೆ.  ಬೆಳಗಾಗುವ ಮುನ್ನವೇ ಕಮಲ ಅರಳುವುದನ್ನ ನೋಡಬಹುದು . ಇತ್ತೀಚಿನ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗಿದೆ. ಕಮಲ ಅರಳಲಿದೆ ಎಂಬುದನ್ನ ಉಪಚುನಾವಣೆ ತೋರಿಸಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: PM Modi- telangana- KCR -government.