ಟಿಪ್ಪು ಬಗ್ಗೆ ಹೇಳಿಕೆ ಕುರಿತು ಬಿಜೆಪಿಯಲ್ಲಿ ಅಸಮಾಧಾನ: ಬೋರ್ಡ್ ಪ್ರದರ್ಶಿಸಿ ಮೌನಕ್ಕೆ ಶರಣಾದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್…

Promotion

ಮೈಸೂರು,ಆ,29,2020(www.justkannada.in): ಟಿಪ್ಪು ಸುಲ್ತಾನ್ ವೀರ, ಈ ಮಣ್ಣಿನ ಮಗ ಎಂದು ಹೇಳಿಕೆ ನೀಡಿದ್ದಕ್ಕೆ ಬಿಜೆಪಿಯಲ್ಲಿ ವ್ಯಾಪಕ ಅಸಮಾಧಾನ ಹೊರ ಹಾಕಿದ ಬೆನ್ನಲ್ಲೆ ಇದೀಗ ಈ ಕುರಿತು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮೌನಕ್ಕೆ ಶರಣಾಗಿದ್ದಾರೆ.tippu-statement-h-vishwanath-surrendered-silence

ಈ ಸಂಬಂಧ ಮಾಧ್ಯಮಗಳು  ಮಾತನಾಡಿಸಲು ಮುಂದಾದ ವೇಳೆ ಎಂಎಲ್ ಸಿ ಹೆಚ್.ವಿಶ್ವನಾಥ್, ಈ ಹೊತ್ತು ಏಕದಾಶಿ ಮೌನ ನಾಳೆ ಮಾತನಾಡೋಣ ಎಂಬ ಬೋರ್ಡ್ ಪ್ರದರ್ಶನ ಮಾಡಿ ಮೌನಕ್ಕೆ ಶರಣಾದರು.

ರಾಜೇಂದ್ರ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲೂ ಮಾತನಾಡದ ವಿಶ್ವನಾಥ್, ಏಕಾದಶಿ ಹಿನ್ನೆಲೆ ನಾನು ಮತನಾಡುವುದಿಲ್ಲ ಎಂದು ಹೇಳಿ ಮೌನಕ್ಕೆ ಜಾರಿದ್ದಾರೆ. ಟಿಪ್ಪು ಸುಲ್ತಾನ್ ವೀರ, ಸ್ವಾತಂತ್ರ್ಯ ಹೋರಾಟಗಾರ ಎಂದು ವಿಶ್ವನಾಥ್ ಹೇಳಿದ್ದರು. ಈ ಬಗ್ಗೆ ಇಂದು ಮಾತನಾಡಿ ಸಂಸದ ಪ್ರತಾಪ್ ಸಿಂಹ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.tippu-statement-h-vishwanath-surrendered-silence

ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೆ ಎಚ್.ವಿಶ್ವನಾಥ್ ವಿನೂತ‌ನವಾಗಿ ಪ್ರತಿಕ್ರಿಯೆ ನೀಡಿದ್ದು ಮಾತನಾಡುವ ಬದಲು ಪುಸ್ತಕದ ಮೇಲೆ ಅಕ್ಷರ ಬರೆದು ಮಾಧ್ಯಮಗಳ ಕ್ಯಾಮರಾ ಮುಂದೆ ಅಕ್ಷರ ಪ್ರದರ್ಶನ ಮಾಡಿದರು. ಸುತ್ತೂರು ಶಾಖಾ ಮಠದಲ್ಲಿ ಈ ಘಟನೆ ನಡೆಯಿತು.

Key words: Tippu statement-H. Vishwanath -surrendered – silence.