93.5  ರೆಡ್ ಎಫ್ಎಂ ನಿಂದ  ತನ್ನ ಕೇಳುಗರ ಆನಂದಕ್ಕಾಗಿ ‘ನಾನ್ಸ್ ಸ್ಟಾಪ್ 8  ಹಾಡುಗಳ ಸರಮಾಲೆ’

Promotion

ಮೈಸೂರು,ಆಗಸ್ಟ್,13,2021(www.justkannada.in): ಭಾರತದಲ್ಲಿ ಅತಿಹೆಚ್ಚು ಅವಾರ್ಡ್ ಗಳನ್ನು ಪಡೆದಿರುವ ಅತೀದೊಡ್ಡ ರೇಡಿಯೋ ನೆಟ್ವರ್ಕ್ ,93.5  ರೆಡ್ ಎಫ್ಎಂ . ಮೈಸೂರು ಮಂಗಳೂರು, ಹುಬ್ಬಳ್ಳಿ-ಧಾರವಾಡ, ಹಾಗೂ ಕಲಬುರ್ಗಿ ನಗರಗಳಲ್ಲಿ ಪ್ರಸ್ತುತ ಪಡಿಸುತ್ತಿದೆ” ನಾನ್ಸ್ಟಾಪ್ 8  ಹಾಡುಗಳ ಸರಮಾಲೆ”. ಕೇಳುಗರಿಗೆ ಅತಿಹೆಚ್ಚು ಸೂಪರ್ ಹಿಟ್ ಹಾಡುಗಳನ್ನು ದಿನಪೂರ್ತಿ ಪ್ರಸಾರಮಾಡುವ ಸಲುವಾಗಿ ಈ ವಿಭಿನ್ನ ಪ್ರಯೋಗಕ್ಕೆ ಮುಂದಾಗಿದೆ.

ನಾನ್ಸ್ಟಾಪ್  8 ಹಾಡುಗಳನ್ನು (೮ಹಾಡುಗಳ ಸರಮಾಲೆಯಾಗಿ ) ಪ್ರಸಾರ ಮಾಡುವ ಏಕೈಕ ರೇಡಿಯೋ ಸ್ಟೇಷನ್ ಸೂಪರ್ ಹಿಟ್ಸ್   93.5 ರೆಡ್ ಎಫ್ಎಂ ಆಗಿದೆ.

ಕೇಳುಗರ ಮನೋರಂಜನೆಯೇ ರೆಡ್ ಎಫ್ಎಂನ ಜೀವಾಳ ಅಂತೆಯೇ ಹಲವು ಜನಪರಕಾಳಜಿ, ಮಾಹಿತಿ ಆಧಾರಿತ ಹಾಗು ಮನೋರಂಜನಾಕಾರ್ಯಕ್ರಮಗಳನ್ನು ಯಶಸ್ವೀಯಾಗಿ ನೀಡುತ್ತಾ ಬಂದಿದೆ.

ನಾನ್ಸ್ಟಾಪ್ 8ಹಾಡುಗಳ ಸರಮಾಲೆ –ಚಲನಚಿತ್ರಗೀತೆಗಳನ್ನು ಕೇಳಲು ಇಚ್ಚಿಸುವ ಪ್ರತಿಯೊಬ್ಬರಿಗೂ 8   ಹಾಡುಗಳ ರಸದೌತಣವನ್ನು ನೀಡುತ್ತದೆ ಅಂತೆಯೇ 8 ಹಾಡುಗಳ ಸರಮಾಲೆ ಕೇಳುಗರ ಸಂಭ್ರಮ ಹೆಚ್ಚಿಸಿ ಮನೋರಂಜಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

8ರ ನಂಟು ಗಟ್ಟಿ ಆಗಲೆಂದು ರೆಡ್ಎಫ್ಎಂ ನ ನಾನ್ಸ್ಟಾಪ್ ೮ಹಾಡುಗಳ ಸರಮಾಲೆಯನ್ನು ಇದೆ ಆಗಸ್ಟ್ 8 ರಂದು ಬೆಳ್ಳಿಗೆ 8 ರಿಂದ ಪ್ರಾರಂಭಿಸಲಾಯಿತು . ಸಂಗೀತನಿರ್ದೇಶಕರಾದ ಅರ್ಜುನ್ ಜನ್ಯ  ,ಹಿನ್ನಲೆಗಾಯಕರಾದ.ವಿಜಯಪ್ರಕಾಶ್ , ಅನುರಾಧಭಟ್, ವಿ. ಮನೋಹರ್, ಮತ್ತಿತರ ಸಂಗೀತ ಲೋಕದ ಗಣ್ಯರು ಹಾಗು ಸಂಗೀತಪ್ರಿಯರು ಶುಭಹಾರೈಸಿದ್ದು ವಿಶೇಷ.

ಸುರೇಂದರ್ (COO and Director, Red FM Network):”ಕೇಳುಗರ ಮನೋರಂಜನೆ ನಮ್ಮಆದ್ಯತೆ ಕೊರೊನದ ಅಟ್ಟಹಾಸದ ನಡುವೆ ನಮ್ಮ 8  ಹಾಡುಗಳ ಸರಮಾಲೆ ನಮ್ಮ ಜನರಿಗೆ ಸ್ವಲ್ಪ ನೆಮ್ಮದಿಯನ್ನು ತರುವುದೆಂದು ನಾವು ಆಶಿಸುತ್ತೇವೆ . ಸಂಗೀತದ ಮೇಲೆ ಪ್ರೀತಿ ಒಲವು ಸ್ವಾಭಾವಿಕ, ರೇಡಿಯೋವಾಹಿನಿಯಾದ ನಾವು ಕೇಳುಗರಿಗೆ ಆಯ್ದ ಸುಮಧುರವಾದ 8  ನಾನ್ಸ್ಟಾಪ್ ಹಾಡುಗಳ ಸರಮಾಲೆಯನ್ನು ನೀಡುತ್ತಿದ್ದೇವೆ.  ಪ್ರಾಯಶ ಪ್ರತಿಘಂಟೆಯೂ ಪ್ರಸಾರವಾಗುವ ಈ ಸರಮಾಲೆಯ ನಮ್ಮ ಈ ಕೊಡುಗೆ ಮೈಸೂರು, ಮಂಗಳೂರು ಹುಬ್ಬಳ್ಳಿ-ಧಾರವಾಡದ ಹಾಗೂ ಕಲಬುರ್ಗಿ ಜನರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೆವೆ.”

Key words: Time -NonStop 8 -Songs –93.5   Red FM- Listener