‘ಟಿಕ್ ಟಾಕ್ ಸ್ಟಾರ್’ ಧನುಶ್ರೀ ಈಗ ಹೀರೋಯಿನ್!

Promotion

ಬೆಂಗಳೂರು, ಮಾರ್ಚ್ 13, 2021 (www.justkannada.in): 

ಟಿಕ್ ಟಾಕ್ ಬೆಡಗಿ, ಬಿಗ್ ಬಾಸ್ ಸ್ಪರ್ಧಿ ಧನುಶ್ರೀ ಈಗ ಹೀರೋಯಿನ್!

ಹೌದು. ಟಿಕ್ ಟಾಕ್ ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಧನುಶ್ರೀ ಸದ್ದಿಲ್ಲದೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಬಿಗ್ ಬಾಸ್ 8 ನೇ ಸರಣಿಯ ಮೊಟ್ಟ ಮೊದಲ ಸ್ಪರ್ಧಿಯಾಗಿ ಅಲ್ಲಿಂದ ಹೊರಬಂದ ಮೊದಲ ಸ್ಪರ್ಧಿಯೂ ಈ ಟಿಕ್ ಟಾಕ್ ಸ್ಟಾರ್! ಇದೀಗ ಹೊಸ ಚಾನ್ಸ್ ಪಡೆದಿದ್ದಾರೆ.

ಹೆಸರಿಡದ ಕನ್ನಡ ಚಿತ್ರವೊಂದರಲ್ಲಿ ಧನುಶ್ರೀ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ತೆಲುಗು ನಟ ಅಶ್ವಿನ್ ಹೀರೋ ಆಗಿರುವ ಚಿತ್ರಕ್ಕೆ ಧನುಶ್ರೀ ನಾಯಕಿಯಾಗಿದ್ದಾರೆ.

ರೋಮ್ಯಾಂಟಿಕ್ ಲವ್ ಸ್ಟೋರಿ ಹೊಂದಿರುವ ಚಿತ್ರದ ಕೆಲ ಭಾಗದ ಚಿತ್ರೀಕರಣ ಈಗಾಗಲೇ ನಡೆದಿದೆ.