Friday, September 11, 2026

BDA Apartments

Home Front Page ಹುಲಿ ಗಣತಿ ಕ್ಯಾಮೆರಾದಲ್ಲಿ ಕರಿ ಚಿರತೆ ಸೆರೆ…!

ಹುಲಿ ಗಣತಿ ಕ್ಯಾಮೆರಾದಲ್ಲಿ ಕರಿ ಚಿರತೆ ಸೆರೆ…!

ಚಾಮರಾಜನಗರ,ಡಿಸೆಂಬರ್,19,2020(www.justkannada.in) ಹುಲಿ ಗಣತಿಗೆ ಹಾಕಲಾಗಿದ್ದ ಕ್ಯಾಮೆರಾದಲ್ಲಿ ಕರಿ ಚಿರತೆಯೊಂದು ಸೆರೆಯಾಗಿದೆ.Teachers,solve,problems,Government,bound,Minister,R.Ashokಮಲೆಮಹದೇಶ್ವರ ವನ್ಯಜೀವಿ ಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಹುಲಿ ಗಣತಿಗೆ ಹಾಕಲಾಗಿದ್ದ ಕ್ಯಾಮೆರಾದಲ್ಲಿ ಕರಿ ಚಿರತೆಯೊಂದು ಸೆರೆಯಾಗಿದೆ.

ಈ ಬಗ್ಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ಮಾತನಾಡಿ, ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಿಚಿರತೆ ಸೆರೆಯಾಗಿತ್ತು.  tiger-census-Black-Leopard-Captureಅದು ಚಾಮರಾಜನಗರದ ಬಘೀರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದೇ ಬಘೀರಾನೆ ಸೆರೆಯಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.

ಕಳೆದ ಬಾರಿಯೂ ಮಲೆಮಹದೇಶ್ವರ ವನ್ಯಜೀವಿ ಧಾಮದ ಅಂಚಿನಲ್ಲಿ ಚಿರತೆ ಕಾಣಿಸಿತ್ತು. ಅದು ತನ್ನ ಆವಾಸ ಸ್ಥಾನ ವಿಸ್ತರಿಸಿ ನಮ್ಮ ವನ್ಯಜೀವಿ ಧಾಮಕ್ಕೆ ಬರಬಹುದು ಎಂದುಕೊಂಡಿದ್ದೆವು.

tiger-census-Black-Leopard-Capture

ನಮ್ಮ ಅರಣ್ಯದಲ್ಲಿ ಕಾಡೆಮ್ಮೆ, ಜಿಂಕೆ, ಕಡವೆ ಮುಂತಾದ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದ್ದು, ಚಿರತೆ ಬಂದಿರಬಹುದು. ಇಲ್ಲವೇ, ಇದೇ ಬೇರೆ ಚಿರತೆ ಆಗಿರಬಹುದು. ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

key words : tiger-census-Black-Leopard-Capture