ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆ….

Promotion

ಮಂಡ್ಯ,ಅಕ್ಟೋಬರ್,31,2020(www.justkannada.in): ಮಂಡ್ಯ ಜಿಲ್ಲೆಯ ಬಿ.ಹೊಸೂರು ಗ್ರಾಮದಲ್ಲಿ  ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದು ಅವುಗಳನ್ನ ರಕ್ಷಿಸಿ ಅರಣ್ಯ ಇಲಾಖೆಗೆ ನೀಡಲಾಗಿದೆ.jk-logo-justkannada-logo

ಬಿ.ಹೊಸೂರು ಗ್ರಾಮದ ವಿನಯ್ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆಗಳು ಪತ್ತೆಯಾಗಿವೆ. ಇಂದು ಬೆಳಿಗ್ಗೆ ಗದ್ದೆಗೆ ನೀರು ಹಾಯಿಸುವ ವೇಳೆ ಚಿರತೆ  ಮರಿಗಳು ಪತ್ತೆಯಾಗಿದ್ದು, ಗ್ರಾಮಸ್ಥರು ಮರಿಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ನೀಡಿದ್ದಾರೆ.

ಇನ್ನು ಚಿರತೆ ಮರಿಗಳನ್ನು ಕಂಡು ಬಿ.ಹೊಸೂರು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Key words: Three leopard –cubs-found – farm- mandya