ಉಪಚುನಾವಣೆ ಬಳಿಕ ಕಾಂಗ್ರೆಸ್ ಮೂರು ಹೋಳು- ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ…

ತುಮಕೂರು,ಅಕ್ಟೋಬರ್,31,2020(www.justkannada.in):  ಉಪಚುನಾವಣೆ ಬಳಿಕ ಕಾಂಗ್ರೆಸ್ ಮೂರು ಹೋಳಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ ನುಡಿದರು.jk-logo-justkannada-logo

ತುಮಕೂರು ಶಿರಾದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಉಪಚುನಾವಣೆ ಬಳಿಕ ಕಾಂಗ್ರೆಸ್ ಒಡೆದ ಮನೆಯಾಗಲಿದೆ. ಸೋನಿಯಾಗಾಂಧಿ ಬಳಿ ದುಂಬಾಲು ಬಿದ್ದು ಕಾಂಗ್ರೆಸ್ ಅಧ್ಯಕ್ಷರಾದ  ಡಿ.ಕೆ ಶಿವಕುಮಾರ್  ಸಿಎಂ ಆಗುವ ಕನಸು ನುಚ್ಚುನೂರಾಗಲಿದೆ. ಉಪಚುನಾವಣೆ ಬಳಿಕ ಕಾಂಗ್ರೆಸ್ ಮೂರು ಹೋಳಾಗಲಿದೆ. ಸಿದ್ಧರಾಮಯ್ಯ ಗುಂಪು ಒಂದಾದರೇ, ಸಿಎಂ ಕನಸು ಕಾಣುತ್ತಿರುವ ಡಿ.ಕೆ ಶಿವಕುಮಾರ್ ಅವರ ಮತ್ತೊಂದು ಗುಂಪಾಗಲಿದೆ. ಉತ್ತರ ಕರ್ನಾಟಕದಲ್ಲಿ ಇನ್ನೊಂದು ಗುಂಪಾಗಲಿದೆ ಎಂದು ಲೇವಡಿ ಮಾಡಿದರು.after-by-election-congress-devide-shira-dcm-govinda-karajola

ಹಾಗೆಯೇ ಕಾಂಗ್ರೆಸ್ ನಾಯಕರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ನೀರಾವರಿ ಯೋಜನೆಗಳಿಗೆ ಅಪ್ಪ ಅಮ್ಮ ನಾವೇ ಎನ್ನುವವರು ಇಷ್ಟು ದಿನ ಕೆರೆಗಳಿಗೆ ಯಾಕೆ ನೀರು ಹರಿಸಲಿಲ್ಲ ಎಂದು ಪ್ರಶ್ನಿಸಿದ ಡಿಸಿಎಂ ಗೋವಿಂದ ಕಾರಜೋಳ, ಸಿದ್ಧರಾಮಯ್ಯ ಆಡಳಿತದ ವೈಪಲ್ಯದಿಂದ ಕಾಂಗ್ರೆಸ್ ಗೆ ಸೋಲಾಯಿತು ಎಂದರು.

Key words: After – by-election- Congress – devide –shira-DCM- Govinda Karajola.