ಮೈಸೂರಿನಲ್ಲಿ ಮೂವರು ಕೊರೋನಾ ಸೋಂಕಿತ ವ್ಯಕ್ತಿಗಳು ನಾಪತ್ತೆ…

Promotion

ಮೈಸೂರು,ಜು,24,2020(www.justkannada.in):  ಕೊರೋನಾ ಪಾಸಿಟಿವ್ ಬಂದ ಮೂವರು ವ್ಯಕ್ತಿಗಳು ನಾಪತ್ತೆಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk-logo-justkannada-logo

ಮೈಸೂರಿನ ಅಗ್ರಹಾರದ ರಾಮಾನುಜಾ ರಸ್ತೆ ಅಡ್ರೆಸ್ ಕೊಟ್ಟಿರುವ ಮೂವರು ಸೋಂಕಿತ ವ್ಯಕ್ತಿಗಳು  ನಾಪತ್ತೆಯಾಗಿದ್ದಾರೆ. ಈ ಕುರಿತು ಸ್ಥಳಿಯ ಕಾರ್ಪೋಟರ್ ಬಿ.ವಿ. ಮಂಜುನಾಥ್ ಮಾಹಿತಿ ನೀಡಿದ್ದಾರೆ. ಸೋಂಕಿತ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.Three- corona- infected- persons –escape- Mysore.

ಸೋಂಕಿತ ವ್ಯಕ್ತಿಗಳು ಇತ್ತ ಮನೆ ಅಡ್ರೆಸ್ ಕೂಡ ತಪ್ಪಾಗಿ ನೀಡಿದ್ದಾರೆ. ಇನ್ನು ನಾಪತ್ತೆಯಾಗಿರುವ ಮೂವರು ಇನ್ನೆಷ್ಟು ಜನರಿಗೆ ಕೊರೋನಾ ಹರಡುತ್ತಾರೆ ಎಂಬ ಆತಂಕ ಶುರುವಾಗಿದೆ.

Key words: Three- corona- infected- persons –escape- Mysore.