Saturday, September 12, 2026

BDA Apartments

Home Front Page ಕಂಟೈನ್ಮೆಂಟ್ ಪ್ರದೇಶಗಳಿಗೆ ಸ್ಯಾನಿಟೈಸೇಷನ್: ಮನೆ ಮನೆಗೆ ತೆರಳಿ ಜನತೆಗೆ ಧೈರ್ಯ ತುಂಬಿದ ಶಾಸಕ ರಾಮದಾಸ್…

ಕಂಟೈನ್ಮೆಂಟ್ ಪ್ರದೇಶಗಳಿಗೆ ಸ್ಯಾನಿಟೈಸೇಷನ್: ಮನೆ ಮನೆಗೆ ತೆರಳಿ ಜನತೆಗೆ ಧೈರ್ಯ ತುಂಬಿದ ಶಾಸಕ ರಾಮದಾಸ್…

ಮೈಸೂರು,ಜು,24,2020(www.justkannada.in): ಮೈಸೂರು ನಗರದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಈ ನಡುವೆ ನಗರದ ಕೃಷ್ಣರಾಜ ಕ್ಷೇತ್ರದ ಕಂಟೈನ್ಮೆಂಟ್ ಪ್ರದೇಶದ ಭಾಗಗಳಿಗೆ ಸ್ಯಾನಿಟೈಸಿಂಗ್ ಮಾಡಲಾಯಿತು.jk-logo-justkannada-logo

ಈಗಾಗಲೇ ಕೃಷ್ಣರಾಜ ಕ್ಷೇತ್ರದ ಹಲವು ಭಾಗಗಳು ಕಂಟೈನ್ಮೆಂಟ್ ಪ್ರದೇಶಗಳ ವ್ಯಾಪ್ತಿಗೆ ಒಳಪಟ್ಟಿವೆ. ಹೀಗಾಗಿ ಶಾಸಕ ರಾಮದಾಸ್ ನೇತೃತ್ವದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಪ್ರದೇಶಗಳಿಗೆ ಸ್ಯಾನಿಟೈಸಿಂಗ್ ಮಾಡಲಾಯಿತು. ರಾಮಾನುಜ ರಸ್ತೆಯ ಶ್ರೀನಿವಾಸ ಅಗ್ರಹಾರ ಕಂಟೈನ್ಮೆಂಟ್ ಪ್ರದೇಶಗಳಿಗೆ ಸ್ಯಾನಿಟೈಸ್ ಮಾಡಲಾಯಿತು.sanitization-containment-areas-mysore-mla-ramadas

ಇನ್ನು ನಗರದಲ್ಲಿ ಕೊರೋನಾ ಮಹಾಮಾರಿ ಹೆಚ್ಚಾಗಿ ಹಬ್ಬಿರುವ ಹಿನ್ನೆಲೆ ಜನತೆ ಆತಂಕಗೊಂಡಿದ್ದಾರೆ. ಹೀಗಾಗಿ ಶಾಸಕ ಎಸ್.ಎ ರಾಮದಾಸ್ ಕೆ.ಆರ್ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ನಿವಾಸಿಗಳಿಗೆ ಧೈರ್ಯ ತುಂಬಿದರು. ಶಾಸಕ ರಾಮದಾಸ್ ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಾಥ್ ನೀಡಿದರು.

Key words: Sanitization – Containment Areas-mysore-MLA-Ramadas