ರಾಜಕೀಯ ಪ್ರಬುದ್ದತೆ ಇಲ್ಲದವರು ಈ ರೀತಿ ಹೇಳುತ್ತಾರೆ : ಬಿಜೆಪಿ ಸರ್ಕಾರದ ಪರ ಬ್ಯಾಟಿಂಗ್ : ಮಾಜಿ ಸಿಎಂಗೆ ಟಾಂಗ್ ಕೊಟ್ಟ ಶಾಸಕ  ಜಿ.ಟಿ.ದೇವೇಗೌಡ

Promotion

ಮೈಸೂರು,ಡಿಸೆಂಬರ್,11,2020(www.justkannada.in) : ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭಧ್ರವಾಗಿದೆ. ರಾಜಕೀಯ ಪ್ರಬುದ್ದತೆ ಇಲ್ಲದವರು ಸರ್ಕಾರ ಅಲ್ಲಾಡುತ್ತೇ, ಬೀಳುತ್ತೇ ಈ ರೀತಿ ಹೇಳುತ್ತಾರೆ ಎಂದು ಶಾಸಕ  ಜಿ.ಟಿ.ದೇವೇಗೌಡ ಬಿಜೆಪಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.logo-justkannada-mysoreಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಸದೃಢವಾಗಿದೆ. ಇನ್ನು 5 ವರ್ಷ ಬಿಜೆಪಿ ಸರ್ಕಾರ ಬೀಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿಎಂ ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಎರಡು ಸರ್ಕಾರಗಳು ಅವಧಿ ಪೂರೈಸಲಿವೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಸಕ‌ ಜಿ.ಟಿ.ದೇವೇಗೌಡ ಟಾಂಗ್ ನೀಡಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆಗಳು ಸರ್ಕಾರದ ಪರವಾಗಿ ಇರಲಿವೆ. ಯಾರು ಏನೇ ಮಾತನಾಡಿದರು ಈ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Those-without-political-maturity-government-shakes-falls-MLA-G.T.DeveGowda

key words : Those-without-political-maturity-government-shakes-falls-MLA-G.T.DeveGowda