ಐಟಿ ಜಾಬ್ ತೊರೆದು ಹೋಮ್ ಮೇಡ್ ಫುಡ್ ಡಿಲೆವರಿ ಮಾಡಿದ ಈ ಮಹಿಳೆ ಈಗ 11 ರೆಸ್ಟೋರೆಂಟ್ ಗಳ ಮಾಲಕಿ

Promotion

ಬೆಂಗಳೂರು:ಆ-31:(www.justkannada.in) ಪಕ್ಕಾ ಮರಾಠಿ ಪಾಕಪದ್ಧತಿಯ ಆಹಾರ ಪರಿಣತಿ ಹೊಂದಿರುವ ಪೂರ್ಣಬ್ರಹ್ಮ ಆಲ್-ವೆಜ್ ರೆಸ್ಟೋರೆಂಟ್‌ ಸಮೂಹಗಳ ಮಾಲಕಿಯಾಗಿರುವ ಈ ಮಹಿಳೆ ಹೆಸರು ಜಯಂತಿ ಕಟಾಳೆ. ಇವರು 30 ವರ್ಷಗಳ ಹಿಂದೆ ತನ್ನ ಅಜ್ಜಿಯ ಸಲಹೆ ಮೇರೆಗೆ ಸಾವಯವ ಆಹಾರ ಪದಾರ್ಥಗಳೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ರಾಸಾಯನಿಕ ಮುಕ್ತ, ಆರೋಗ್ಯ ಪೂರ್ಣ ಆಹಾರ ಪದ್ಧತಿ ಬಳಸಿ ವಿವಿಧ ರೀತಿಯ ಅಡುಗೆಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು.

ಮೊದಲಿನಿಂದ ಜಯಂತಿಯವರಿಗೆ ಮಹಾರಾಷ್ಟ್ರೀಯನ್ ಪದ್ಧತಿಯ ತಮ್ಮ ಅಡುಗೆ ಸಿದ್ಧಪಡೆಸುವುದೆಂದರೆ ವಿಶೇಷ ಪ್ರೀತಿ. ಅದೇನೋ ಒಂದು ಹವ್ಯಾಸ. ಅವರ ಈ ಹವ್ಯಾಸವೇ ಇಂದು ಅವರು ಭಾರತ ಹಾಗೂ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 11 ರೆಸ್ಟೋರೆಂಟ್ ಗಳನ್ನು ತೆರೆಯಲು ಸಾಧ್ಯವಾಯಿತು ಎನ್ನುತ್ತಾರೆ ಜಯಂತಿ.

ಈ ಹೋಟೆಲ್ ಉದ್ಯಮಕ್ಕೆ ಬರುವ ಮೊದಲು ಜಯಂತಿ ಕಟಾಳೆ ಐಟಿ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದರಂತೆ. ಈ ವೇಳೆ ಅವರು ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದರಂತೆ. ಅಲ್ಲಿನ ಆಅಹಾರ ಅವರಿಗೆ ಹೊಂದಿಕೆಯಾಗುತ್ತಿರಲ್ಲ. ಅಲ್ಲಿ ದೇಶಿ ಆಹಾರವೂ ಸಿಗುತ್ತಿರಲಿಲ್ಲ. ಉಟ-ತಿಂಡಿಗಾಗಿ, ಮನೆಯಲ್ಲೇ ತಯಾರಿಸಲ್ಪಡುವ ತಿಂಡಿ-ತಿನಿಸುಗಳಾಗಲಿ ಅಲ್ಲಿ ಲಭ್ಯವಾಗದೇ, ಅಲ್ಲಿನ ಆಅಹಾರ ಸೇವಿಸಲಾಗದೇ ತುಂಬಾ ಕಷ್ಟಪಡುತ್ತಿದ್ದರಂತೆ. ತಮ್ಮ ಈ ಸಮಸ್ಯೆ ಬಗ್ಗೆ ಅವರು ತಮ್ಮ ಸ್ನೇಹಿತೆಯರಲ್ಲಿ ಕೂಡ ಹೇಳಿದ್ದರಂತೆ. ಅವರೂ ಕೂಡ ಇದೇ ಸಮಸ್ಯೆಯನ್ನು ತೋಡಿಕೊಂಡರಂತೆ. ಆಗ ಆರಂಭವಾದ ಯೋಚನೆಯೇ ಈ ಮಹಾರಾಷ್ಟ್ರೀಯನ್ ಶೈಲಿಯ ಆಹಾರ ಪದ್ಧತಿಯ ರೆಸ್ಟೋರಂಟ್ ಯೋಜನೆ.

ತನ್ನ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಸಹಾಯದಿಂದ ಜಯಂತಿ ಅವರು ಆರ್ಕುಟ್‌ನಲ್ಲಿ ಖಾತೆಯನ್ನು ರಚಿಸಿ, ಮನೆಯಲ್ಲಿ ತಯಾರಿಸಿದ ‘ಮೋದಕ’ (ಗಣೇಶ ಚತುರ್ಥಿ ಸಮಯದಲ್ಲಿ ತಯಾರಿಸುವ ಬೆಲ್ಲ ಮತ್ತು ತೆಂಗಿನಕಾಯಿ ಸ್ಟಫ್ಡ್ ಸಿಹಿ ತಿನಿಸು) ಕ ಬೇಕಿದ್ದರೆ ಆರ್ಡರ್ ಕೊಡುವಂತೆ ಪೋಸ್ಟ್ ಅನ್ನು ಹಾಕಿದರು. ಕ್ಷಣಾರ್ಧದಲ್ಲಿ ಅದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತು.

ಜನರಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡುವಲ್ಲಿ ಇದು ನನ್ನ ಮೊದಲ ಹಂತವಾಗಿ ಆರಂಭವಾಯಿತು. ಎರಡು ವರ್ಷಗಳ ನಂತರ, ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಇನ್ಫೋಸಿಸ್ ಗೆ ಸೇರಲು ಬೆಂಗಳೂರಿಗೆ ಬಂದೆ. ಆದರೂ ಆಹಾರದ ಬಗೆಗಿನ ತಮ್ಮ ಪ್ರೀತಿ ಕಡಿಮೆಯಾಗಲಿಲ್ಲ. ಹಬ್ಬಗಳು ಮತ್ತು ಸಂದರ್ಭಗಳಲ್ಲಿ ನಾನು ಆದೇಶಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದೆ. ವೃದ್ಧರೊಬ್ಬರು ಸಿಹಿತಿಂಡಿಗಳನ್ನು ತೆಗೆದುಕೊಳ್ಳಲು ಒಮ್ಮೆ ಜಯಂತಿಯವರ ಮನೆಗೆ ಬಂದರಂತೆ. ಅಂದಿನಿಂದ ತಮ್ಮ ಜೀವನ ಮಹತ್ವದ ತಿರುವು ಪಡೆದುಕೊಂಡಿದ್ದಾಗಿ ಜಯಂತಿ ತಿಳಿಸುತ್ತಾರೆ.

ಅಲ್ಲದೇ ಮೂರು ವರ್ಷಗಳಕಾಲ ಮಹಾರಾಷ್ಟ್ರೀಯನ್ ಆಹಾರಗಳ ಕುರಿತು ವಿಶೇಷ ಸಂಶೋಧನೆಗಳನ್ನು ನಡೆಸಿ ಮರಾಠಿ ಆಹಾರ ಪದ್ಧತಿಗಳನ್ನುಕರಗತಮಾಡಿಕೊಂಡರಂತೆ. ಪೋಹಾ, ವಡಾಪಾವ್ ನಿಂದ ಹಿಡಿದು ಎಲ್ಲಾರೀತಿಯ ಮಹಾರಾಷ್ಟ್ರೀಯನ್ ಆಹಾರ ಸಿದ್ಧಪಡಿಸಿ ಮಾರಾಟ ಮಾಡಲು ಸ್ನೇಹಿತರಿಂದ ಸಾಲಪಡೆದು ಸಣ್ಣ ಉಪಹಾರಗೃಹವೊಂದನ್ನು ಸ್ಥಾಪಿಸಿದರು.

ಬಳಿಕ ಜಯಂತಿ ತಮ್ಮ ಮೊದಲ ಹೋಟೆಲ್ ನ್ನು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನ 4ನೇ ಸೆಕ್ಟರ್‌ನಲ್ಲಿ ‘ಪೂರ್ಣಬ್ರಹ್ಮ’ ಮಹಾರಾಷ್ಟ್ರಿಯನ್‌ ಸಸ್ಯಾಹಾರಿ ಹೋಟೆಲ್‌ನ್ನು ಆರಂಭಿಸಿದರು. ಇಲ್ಲಿ ಮಕ್ಕಳಿಂದ ಹಿಡಿದು ವೃದ್ಧರಿಗೂ ಇಷ್ಟವಾಗುವ ಪಕ್ಕಾ ಮಹಾರಾಷ್ಟ್ರಿಯನ್‌ ಖಾದ್ಯಗಳು ಲಭ್ಯವಿದೆ. ಇದರ ಜತೆಗೆ ಮಹಾರಾಷ್ಟ್ರೀಯನ್ ಸಂಸ್ಕೃತಿಯ ಅನಾವರಣ ಕೂಡ ಈ ರೆಸ್ಟೋರೆಂಟ್ ನಲ್ಲಿ ಕಾಣಬಹುದಾಗಿದೆ.

ಹೀಗೆ ಆರಂಭವಾದ ಅವರ ಹೋಟೆಲ್ ಉದ್ಯಮದ ಪಯಣ ಬಳಿಕ ಮುಂಬೈ, ಪುಣೆ, ಅಮರಾವತಿ ಸೇರಿದಂತೆ ದೇಶಾದ್ಯಂತ ಪೂರ್ಣಬ್ರಹ್ಮ ರೆಸ್ಟೋರೆಂಟ್ ಸರಪಳಿ ಸ್ಥಾಪನೆ ಮಾಡಿದ್ದಾಗಿ ಹಾಗೂ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ವರೆಗೂ ತಮ್ಮ ಹೋಟೆಲ್ ನ್ನು ವಿಸ್ತರಿಸಿದ್ದಾಗಿ ತಿಳಿಸಿದ್ದಾರೆ.

ಈ ಎಲ್ಲಾ ತಮ್ಮ ಹೋರಾಟಗಳಲ್ಲಿ ಅವರ ಅತಿದೊಡ್ಡ ಶಕ್ತಿಯೆಂದರೆ ಅವರ ಪತಿ ಮತ್ತು ಕುಟುಂಬವಂತೆ. ಅಲ್ಲದೇ ಅವರ ಮಗ ಕೂಡ ಅವರ ಈ ಎಲ್ಲಾ ವ್ಯವಹಾರಗಳಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಪ್ರಯಾಣವು ಇದೀಗ ಪ್ರಾರಂಭವಾಗಿದೆ ಮತ್ತು ಇನ್ನೂ ಸಾಕಷ್ಟು ಕ್ರಮಿಸಬೇಕಿದೆ. ಜಗತ್ತಿನಾದ್ಯಂತ 5,000 ಮಳಿಗೆಗಳನ್ನು ತೆರೆಯುವುದು ಮತ್ತು ಪ್ರತಿಯೊಬ್ಬ ಭಾರತೀಯನು ಹಂಬಲಿಸುವ ಅಧಿಕೃತ ದೇಸಿ ಆಹಾರವನ್ನು ಒದಗಿಸುವುದು ನನ್ನ ಅಂತಿಮ ಕನಸು ಎಂದು ಜಯಂತಿ ತಮ್ಮ ಸಾಧನೆಯ ಬಗ್ಗೆ ವಿವರಿಸುತ್ತಾರೆ.

ಐಟಿ ಜಾಬ್ ತೊರೆದು ಹೋಮ್ ಮೇಡ್ ಫುಡ್ ಡಿಲೆವರಿ ಮಾಡಿದ ಈ ಮಹಿಳೆ ಈಗ 11 ರೆಸ್ಟೋರೆಂಟ್ ಗಳ ಮಾಲಕಿ

This Mom Left an IT Job to Deliver Homemade Food, Now Owns 11 Restaurants!