ರೌಡಿ ಶೀಟರ್ ಗೆ ಕಪಾಳ ಮೋಕ್ಷ ಮಾಡಿದ ಚಾಮರಾಜನಗರ ಎಸ್ಪಿ ಆನಂದ್ ಕುಮಾರ್ …..

ಚಾಮರಾಜನಗರ,ಆ,31,2019(www.justkannada.in):  ಗೌರಿ ಗಣೇಶ ಹಬ್ಬ ಹಿನ್ನೆಲೆ  ರೌಡಿಶೀಟರ್ ಗಳ ಪರೇಡ್ ನಡೆಸುತ್ತಿದ್ದ ವೇಳೆ ಚಾಮರಾಜನಗರ ಎಸ್ ಪಿ ಆನಂದ್ ಕುಮಾರ್ ಕಮ್ಯೂನಲ್ ಗೂಂಡಾನಿಗೆ ಕಪಾಳ ಮೋಕ್ಷ ಮಾಡಿ ಎಚ್ಚರಿಕೆ ನೀಡಿದ ಘಟನೆ ನಡೆಯಿತು.

ಗಣೇಶ ಹಬ್ಬದ ಹಿನ್ನೆಲೆ ಚಾಮರಾಜನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ರೌಡಿ ಶೀಟರ್, ಕಮ್ಯೂನಲ್ ಗೂಂಡಾಯಿಸಂ ನಡೆಸಿದವರಿಗೆ  ಮುಂಜಾಗ್ರತಾ ಕ್ರಮವಾಗಿ ಚಾಮರಾಜನಗರ ಪೊಲೀಸ್ ಪೆರೆಡ್ ಗ್ರೌಂಡ್ ನಲ್ಲಿ ಪರೇಡ್  ನಡೆಸಿ ಎಚ್ಚರಿಕೆ ನೀಡಲಾಯಿತು.

ಇದೇ ವೇಳೆ ಚಾಮರಾಜನಗರ ಎಸ್ಪಿ ಆನಂದ್ ಕುಮಾರ್ ಅವರು ಕಮ್ಯೂನಲ್ ಗೂಂಡಾನಿಗೆ ಕಪಾಳ ಮೋಕ್ಷ ಮಾಡಿದರು.  ಡಿವೈಎಸ್ಪಿ ಕಾರ್ ತಡೆದು ರೌಡಿಶೀಟರ್  ಗಲಾಟೆ ಮಾಡಿದ್ದನು. ಹೀಗಾಗಿ  ಕೇವಲ ಕಪಾಳಕ್ಕೆಷ್ಟೇ ಅಲ್ಲ ಕೈಗೂ ಎಸ್ ಪಿ ಆನಂದ್ ಕುಮಾರ್ ಲಾಠಿಯ ರುಚಿ ತೋರಿಸಿದರು.

ಅಲ್ಲದೆ ಗಣೇಶ ಹಬ್ಬದ ವೇಳೆ ಗಲಾಟೆಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಿದ  ಎಸ್ಪಿ ಆನಂದ್ ಕುಮಾರ್, ಯಾವುದೇ ಗಲಾಟೆ, ಹಫ್ತಾ ವಸೂಲಿ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ  ಖಡಕ್ ವಾರ್ನಿಂಗ್ ಕೊಟ್ಟರು. ಚಾಮರಾಜನಗರ ಜಿಲ್ಲೆಯಲ್ಲಿ 770 ರೌಡಿ ಶೀಟರ್ ಗಳಿದ್ದಾರೆ.

 

Key words: Chamarajanagar- SP- Anand Kumar – slapped -rowdy sheeter