ಮೈಸೂರಿನಲ್ಲಿ ಮನೆಗಳ್ಳತನ: ನಗದು, ಚಿನ್ನಾಭರಣ ದೋಚಿದ ಖದೀಮರು

Promotion

ಮೈಸೂರು, ಸೆಪ್ಟೆಂಬರ್ 05, 2021 (www.justkannada.in): ಮೈಸೂರಿನಲ್ಲಿ ತಡರಾತ್ರಿ ಮನೆ ಕಳ್ಳತನ ನಡೆದಿದೆ. ಮನೆ ಬಾಗಿಲು ಮುರಿದು ಚಿನ್ನಾಭರಣ ಹಾಗೂ ಹಣವನ್ನು ಕಳ್ಳರು ದೋಚಿರುವ ಘಟನೆ ಮೈಸೂರಿನ ಚಾಮುಂಡೇಶ್ವರಿ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.

ಜ್ಯೋತಿ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, 100 ಗ್ರಾಂ ಚಿನ್ನಾಭರಣ, ಬೆಳ್ಳಿ ಪದಾರ್ಥಗಳು, 6. 52 ಲಕ್ಷ ರೂ. ನಗದನ್ನು ಖದೀಮರು ದೋಚಿದ್ದಾರೆ.mysore-accused-arrest-thief-43-mobile-office

ಆಸ್ಪತ್ರೆ ಖರ್ಚಿಗಾಗಿ ತಂದಿದ್ದ ಹಣ ಕಳ್ಳತ ಪಾಲಾಗಿದೆ ಎಂದು ಮನೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಮನೆ ಬಾಗಿಲು, ಬೀರುಗಳು ಹಾಗೂ ಕಬೋರ್ಡ್‌ಗಳನ್ನು ಸಂಪೂರ್ಣ ಶೋಧಿಸಿರುವ ಕಳ್ಳರು ಸಿಕ್ಕ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.

key words: Thief stolen gold and cash in mysore