ಓಮಿಕ್ರಾನ್ ಹರಡುವಿಕೆ ‘ಕ್ಷಿಪ್ರ’ : ವಿಶ್ವ ಆರೋಗ್ಯ ಸಂಸ್ಥೆ ತಜ್ಞೆ ಸೌಮ್ಯ ಸ್ವಾಮಿನಾಥನ್ .

The Omicron outbreak-Dr Soumya Swaminathan-The Chief Scientist - the global health body

 

ನವ ದೆಹಲಿ, ಜನವರಿ ೭, ೨೦೨೨ (www.justkannada.in): ಭಾರತ ಪ್ರಸ್ತುತ ಎದುರಿಸುತ್ತಿರುವಂತಹ ಓಮಿಕ್ರಾನ್ ಬಿಕ್ಕಟ್ಟಿನಲ್ಲಿ ಎದುರಿಸುವಂತಹ ಅತೀ ದೊಡ್ಡ ಸವಾಲೇನೆಂದರೆ ವೈದ್ಯಕೀಯ ಚಿಕಿತ್ಸೆಯ ಬೇಡಿಕೆಯಲ್ಲಿ ತತ್‌ಕ್ಷಣದ ತೀವ್ರ ಹೆಚ್ಚಳ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ಎಚ್ಚರಿಸಿದ್ದಾರೆ.

“ಕೋವಿಡ್‌ನ ೩ನೇ ಅಲೆಯ ಹರಡುವಿಕೆ ಬಹಳ ವೇಗವಾಗಿರುತ್ತದೆ ಹಾಗೂ ಅನಾರೋಗ್ಯಪೀಡಿತರ ಸಂಖ್ಯೆ ಬಹಳ ದೊಡ್ಡ ಪ್ರಮಾಣದಲ್ಲಿರಬಹುದು,” ಎಂದು ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಎದುರಿಸುತ್ತಿರುವ ಕೋವಿಡ್‌ನ ಹೊಸ ತಳಿಯ ಕುರಿತು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಸೌಮ್ಯ ಸ್ವಾಮಿನಾಥನ್ ಅವರು ಹೇಳಿರುವುದಿಷ್ಟು..

ಜಾಗತಿಕ ಮಟ್ಟದಲ್ಲಿ ಪುನಃ ಗಂಭೀರ ಕಾಳಜಿ ಹಾಗೂ ಎಚ್ಚರಿಕೆಯನ್ನು ಉಂಟು ಮಾಡಿರುವಂತಹ ಓಮಿಕ್ರಾನ್ ತಳಿ, ಹೊರರೋಗಿ ವಿಭಾಗಗಳಲ್ಲಿ ಹಾಗೂ ಗೃಹಾಧಾರಿತ ವೈದ್ಯಕೀಯ ಚಕಿತ್ಸೆಯಲ್ಲಿ ದೊಡ್ಡ ಮಟ್ಟದ ಬೇಡಿಕೆಯನ್ನು ಉಂಟು ಮಾಡಬಹುದು.
“ಜನರು ಬಹಳ ಚಿಂತಿತರಾಗಿದ್ದಾರೆ. ನಿಮಗೆ ರೋಗದ ಸೂಚನೆಗಳಿರಬಹುದು ಅಥವಾ ಇಲ್ಲದಿರಬಹುದು ಎಲ್ಲರೂ ವೈದ್ಯರೊಂದಿಗೆ ಸಮಾಲೋಚಿಸಲು ಬಯಸಬಹುದು, ಅಥವಾ ಆರೋಗ್ಯಕಾರ್ಯಕ್ರರ್ತರನ್ನು ಭೇಟಿಯಾಗಲು ಬಯಸಬಹುದು, ಹಾಗೂ ಅವರಿಂದ ಸಲಹೆಯನ್ನು ಪಡೆದುಕೊಳ್ಳುವ ಆತಂಕ ಸೃಷ್ಟಿಯಾಗಬಹುದು. ಈ ರೀತಿಯ ಜನರ ಸಂಖ್ಯೆ ಬಹಳ ಹೆಚ್ಚಾದರೆ ದೊಡ್ಡ ಸವಾಲು ಎದುರಾಗುತ್ತದೆ. ಅದಕ್ಕಾಗಿ ಸಜ್ಜಾಗಬೇಕಿದೆ,”

ಓಮಿಕ್ರಾನ್ ತಳಿಯ ಹರಡುವಿಕೆಯನ್ನು ನಿಭಾಯಿಸಲು ಟೆಲಿ ಸಮಾಲೋಚನಾ ಸೇವೆಗಳನ್ನು ಹೆಚ್ಚಿಸುವಂತೆಯೂ ಸೂಚಿಸಿದ್ದಾರೆ. “ಟೆಲಿ ಆರೋಗ್ಯ ಹಾಗೂ ಟೆಲಿಮೆಡಿಸಿನ್ ಸೇವೆಗಳನ್ನು ಹೆಚ್ಚಿಸಲು ಇದು ಬಹುಶಃ ಅತಿ ಸೂಕ್ತವಾದಂತಹ ಸಮಯ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮಲ್ಲಿ ಹೊರರೋಗಿ ವಿಭಾಗಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕರು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ; ಸಾಧ್ಯವಾದಷ್ಟೂ ಗೃಹ ಆಧಾರಿತ ಚಿಕಿತ್ಸೆ ಅಥವಾ ಪ್ರಾಥಮಿಕ ಚಿಕಿತ್ಸೆಯ ಅಗತ್ಯವಿರುವಂತಹ ಪ್ರಾಥಮಿಕ ಆರೋಗ್ಯ ಐಸೊಲೇಷನ್ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಚಿಕಿತ್ಸೆ ನೀಡಬೇಕಾಗಬಹುದು. ಇದಕ್ಕೆ ಎಲ್ಲವೂ ಸಿದ್ಧವಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಒಳಿತು,

“ಒಟ್ಟಾರೆಯಾಗಿ ಈ ಬಾರಿಯ ಸಾಂಕ್ರಾಮಿಕದ ಹರಡುವಿಕೆಯು, ಐಸಿಯು ಹಾಗೂ ಗಂಭೀರ ಸ್ವರೂಪದ ಖಾಯಿಲೆಯೊಂದಿಗೆ ಆಸ್ಪತ್ರೆಗೆ ಸೇರಬೇಕಾಗುವ ಸಂಭವದ ಸ್ಥಾನದಲ್ಲಿ ಹೆಚ್ಚಾಗಿ ಹೊರರೋಗಿ ವಿಭಾಗ ಹಾಗೂ ಗೃಹ ಆಧಾರಿತ ಸೇವೆಗಳಿಗೆ ಹೆಚ್ಚಿನ ಹೊರೆಯನ್ನು ಉಂಟು ಮಾಡಬಹುದು.”

ಆದರೆ ಭಯವನ್ನುಂಟು ಮಾಡುತ್ತಿರುವ ವಿಷಯವೇನೆಂದರೆ ಜನರು ಈ ಹೊಸ ತಳಿ ಕೇವಲ ಸಾಮಾನ್ಯ ನೆಗಡಿಯನ್ನಷ್ಟೇ ಉಂಟು ಮಾಡುತ್ತಿದ್ದು, ಹೆಚ್ಚು ಚಿಂತಿಸಬೇಕಿಲ್ಲ ಎಂದೇ ಪರಿಗಣಿಸುತ್ತಿರುವುದು,

“ದಕ್ಷಿಣ ಆಫ್ರಿಕಾ ಮತ್ತು ಯುಕೆ ದೇಶಗಳಲ್ಲಿನ ಸನ್ನಿವೇಶ ಆತಂಕವನ್ನು ಸೃಷ್ಟಿಸುವಂತಿದೆ. ದಕ್ಷಿಣ ಆಫ್ರಿಕಾದಲ್ಲಿ ಡೆಲ್ಟಾ ತಳಿಯಲ್ಲಿ ಸೃಷ್ಟಿಯಾಗಿದ್ದಂತಹ ಸೋಂಕಿನ ಪ್ರಮಾಣಕ್ಕಿಂತ ಈಗ ಓಮಿಕ್ರಾನ್ ತಳಿ ಸೃಷ್ಟಿಸಿರುವ ಸೋಂಕಿನ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದೆ. ಅಂದರೆ ಸೋಂಕಿನ ಪ್ರಮಾಣ ಎಷ್ಟರ ಮಟ್ಟಿಗೆ ಹೆಚ್ಚಾಗಬಹುದು ಎಂದು ಊಹಿಸಿ,”

ಹಿಂದಿನ ಅಲೆಯಲ್ಲಿ ಅತಿ ಗಂಭೀರ ಅವಧಿಯಲ್ಲಿ ಸೋಂಕಿನ ಪ್ರಮಾಣ ೪೦,೦೦೦ದಷ್ಟಿತ್ತು. ಈಗ ಓಮಿಕ್ರಾನ್ ಅವಧಿಯಲ್ಲಿ ೧,೪೦,೦೦೦ದಷ್ಟಿದೆ. ಆದರೆ ಆಸ್ಪತ್ರೆಗೆ ಸೇರುವ ಗಂಡಾಂತರ ಕಾಲುಭಾಗದಷ್ಟಿದೆ. ಅಂದರೆ ಸೋಂಕು ಹರಡುವ ಪ್ರಮಾಣ ನಾಲ್ಕು ಪಟ್ಟು ಹೆಚ್ಚು ಮತ್ತು ಆಸ್ಪತ್ರೆಗೆ ದಾಖಲಾಗುವ ಸಂಭವ ಕಾಲು ಭಾಗದಷ್ಟಿದೆ. ಅಂದರೆ ಆಸ್ಪತ್ರೆಗೆ ದಾಖಲಾಗಬೇಕಾಗುವವರ ಸಂಖ್ಯೆ ಈ ಹಿಂದಿನ ಅಲೆಯಷ್ಟೇ ಇರುತ್ತದೆ.

ಸುದ್ದಿ ಮೂಲ: ಎನ್‌ಡಿಟಿವಿ

KEY WORDS : The Omicron outbreak-Dr Soumya Swaminathan-The Chief Scientist – the global health body

ENGLISH SUMMARY :

The Omicron outbreak, which has triggered fresh concerns globally and raised an alarm, will see the burden shift from hospitals to the out-patients department, from ICUs to home-based care, Dr Soumya Swaminathan said.


The Chief Scientist of the global health body called for an urgent ramping up of teleconsultation services to tackle the Omicron-fuelled surge. “Maybe, this is the time to really scale up the telehealth and telemedicine services to make sure we have enough doctors and nurses in out-patients’ clinics; make sure we can treat people at home as much as possible or at primary care isolation centres where they get basic care if they don’t need advance care,” she said.