`ಮಹಾನ್ ತಾತ’ (The great grand Father) ಸಾಕ್ಷ್ಯಚಿತ್ರ ಸದ್ಯದಲ್ಲೇ ನಿಮ್ಮ ಮುಂದೆ

Promotion

ಬೆಂಗಳೂರು,ಸೆಪ್ಟೆಂಬರ್,24,2020(www.justkannada.in) : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಜೀವನ ಮತ್ತು ಹೋರಾಟದ ಕುರಿತು `ಮಹಾನ್ ತಾತ’ (The great grand Father) ಎಂಬ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಅಕ್ಟೋಬರ್ 2ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.jk-logo-justkannada-logoಪೆಡೆಸ್ಟ್ರಿಯನ್ ಪಿಕ್ಚರ್ಸ್ ಮಾಧ್ಯಮ ಸಂಸ್ಥೆ ತಯಾರಿಸಿರುವ ಈ ಸಾಕ್ಷ್ಯ ಚಿತ್ರವನ್ನು ಪ್ರತಿಭಾನ್ವಿತ ನಿರ್ದೇಶಕ ದೀಪು ಅವರು ನಿರ್ದೇಶಿಸಿದ್ದಾರೆ.

ಕರ್ನಾಟಕ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಸಂಜೆ 4ಕ್ಕೆ `The great grandparent's-documentary-front-you- near-futureಗಾಂಧಿ ಜಯಂತಿಯ ಅಕ್ಟೋಬರ್ 2ರ ಸಂಜೆ 4ಕ್ಕೆ ಬೆಂಗಳೂರಿನ ಅರಮನೆ ರಸ್ತೆಯ ಕರ್ನಾಟಕ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಸಾಕ್ಷ್ಯಚಿತ್ರವು ಬಿಡುಗಡೆಯಾಗಲಿದ್ದು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ರಾಜ್ಯದ ಹಲವು ಜಿಲ್ಲಾ ಕೇಂದ್ರಗಳಲ್ಲಿ ಅಂದೇ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಿದೆ ಎಂದು ತಿಳಿಸಲಾಗಿದೆ.

ಕೆ.ಪಿ.ಪ್ರದೀಪ್ ಅವರು ಪೆಡೆಸ್ಟ್ರಿಯನ್ ಪಿಕ್ಚರ್ಸ್ ಎಂಬ ಜನಪರ ಮಾಧ್ಯಮ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲೊಬ್ಬರು. ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸಾಮಾಜಿಕ, ರಾಜಕೀಯ ವಾಸ್ತವಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸಲು ಸಿನಿಮಾ-ಸಾಕ್ಷ್ಯಚಿತ್ರವನ್ನು ಪರಿಣಾಮಕಾರಿಯಾಗಿ ಬಳಸಬೇಕೆನ್ನುವುದು ಅಭಿಲಾಷೆ ಹೊಂದಿದವರಾಗಿದ್ದಾರೆ.

Shit ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

2001 ರಲ್ಲಿ ಸಮಾನ ಮನಸ್ಕ ಗೆಳೆಯರೊಂದಿಗೆ ಪೆಡೆಸ್ಟ್ರಿಯನ್ ಪಿಕ್ಚರ್ಸ್ ಆರಂಭಿಸಿದ ಅವರು, ಕರ್ನಾಟಕ ಬಾಬಾ ಬುಡನ್ ಗಿರಿ, ಬಿಎಂಐಸಿ ಹೋರಾಟ ಸೇರಿದಂತೆ ಹಲವು ಚಳವಳಿಗಳ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರು ನಿರ್ದೇಶಿಸಿದ Shit ಸಾಕ್ಷ್ಯಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿದೆ. ಗೌರಿ ಲಂಕೇಶ್ ಅವರ ಕುರಿತ ‘Our Gauri’ ಹೋರಾಟಗಾರ ನಜೀಬ್ ನಾಪತ್ತೆಯ ನಂತರ ಅಮ್ಮಿ ಎಂಬ ಸಾಕ್ಷ್ಯಚಿತ್ರಗಳನ್ನು ಇತ್ತೀಚೆಗೆ ನಿರ್ದೇಶಿಸಿ ಹೆಸರುಗಳಿಸಿದ್ದಾರೆ.

key words : `The great grandparent’s-documentary-front-you- near-future