ಗುಡ್ ನ್ಯೂಸ್! ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಶೇ.60ರಷ್ಟು ವೀಕ್ಷಕರಿಗೆ ಅವಕಾಶ

Promotion

ಮುಂಬೈ, ಜುಲೈ 04, 2020 (www.justkannada.in): ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಗಳಿಗೆ ಶೇ. 60ರಷ್ಟು ವೀಕ್ಷಕರಿಗೆ ಪ್ರವೇಶಾವಕಾಶ ನೀಡಲು ಸಂಘಟ ಕರು ನಿರ್ಧರಿಸಿದ್ದಾರೆ.

ಪ್ರಧಾನ ಕೋರ್ಟ್‌ಗಳಲ್ಲಿ 4 ಮಂದಿಗೆ ಒಟ್ಟಿಗೇ ಕುಳಿತುಕೊಳ್ಳಲು ಅವಕಾಶವಿದ್ದು, ಬಳಿಕ ಒಂದು ಆಸನ ವನ್ನು ಖಾಲಿ ಬಿಡಬೇಕು. ಹಾಗೆಯೇ ಉಳಿದ ಕೋರ್ಟ್‌ಗಳಲ್ಲಿ ಇಬ್ಬರು ಕುಳಿತ ಬಳಿಕ ಒಂದು ಆಸನವನ್ನು ಖಾಲಿ ಬಿಡಲಾಗುತ್ತದೆ.

ಇದರಿಂದ ಆರಂಭಿಕ ಹಂತದ ಪಂದ್ಯಗಳಲ್ಲಿ ಸುಮಾರು 20 ಸಾವಿರ ವೀಕ್ಷಕರು, ಫೈನಲ್‌ ವೇಳೆ 10 ಸಾವಿರ ವೀಕ್ಷಕರಿಗೆ ಅವಕಾಶ ಲಭಿಸುತ್ತದೆ. ಇದೆಲ್ಲವೂ ಫ್ರಾನ್ಸ್‌ ಸರಕಾರದ ಪರಿಷ್ಕೃತ ಸಾಮಾಜಿಕ ಅಂತರ ನಿಯಮಕ್ಕೆ ಅನುಗುಣವಾಗಿದೆ’ ಎಂದು ಫ್ರೆಂಚ್‌ ಫೆಡ ರೇಶನ್‌ ಅಧ್ಯಕ್ಷ ಬರ್ನಾರ್ಡ್‌ ಗಿಡಿಸೆಲ್ಲಿ ತಿಳಿಸಿದ್ದಾರೆ.