ಎಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು : ಕಪಿಲ್ ದೇವ್ ಟ್ವೀಟ್

Promotion

ಬೆಂಗಳೂರು,ಅಕ್ಟೋಬರ್,24,2020(www.justkannada.in) : ಎಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು. ಶುಭ ಹಾರೈಕೆಗಳಿಂದ ನಾನು ಮುಳುಗಿದ್ದು, ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಮಾಜಿ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.jk-logo-justkannada-logo

ನೆನ್ನೆ ಹೃದಯಾಘಾತಕ್ಕೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಕಪಿಲ್ ದೇವ್ ಅಭಿಮಾನಿಗಳ ಪ್ರೀತಿ, ಹಾರೈಕೆಗೆ ಟ್ವಿಟರ್ ನಲ್ಲಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.Thank,you,everyone's,love,concern,Kapil Dev,tweeted

ಪ್ರಸ್ತುತ, ಅವರನ್ನು ಐಸಿಯುನಲ್ಲಿ ಇರಿಸಿದ್ದು, ಆರೋಗ್ಯ ಸ್ಥಿರವಾಗಿದೆ. ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ ಎಂಬ ಮಾಹಿತಿಯೊಂದಿಗೆ ಆಸ್ಪತ್ರೆಯಲ್ಲಿ ಕಪಿಲ್ ದೇವ್ ಮಗಳು ಅಮ್ಯಾ ಅವರೊಂದಿಗೆ ನಗುತ್ತಿರುವಂತಹ ಚಿತ್ರವನ್ನು ಚೇತನ್ ಶರ್ಮಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Thank,you,everyone's,love,concern,Kapil Dev,tweeted

key words : Thank-you-everyone’s-love-concern-Kapil Dev-tweeted