ಕಣ್ಣು, ಕಿವಿ, ಹೃದಯವಿಲ್ಲದ ಬಿಜೆಪಿ ಸರ್ಕಾರ ; ಡಿ.ಕೆ.ಶಿವಕುಮಾರ್ ಆಕ್ರೋಶ

0
177

ಬೆಂಗಳೂರು,ಅಕ್ಟೋಬರ್,24,2020(www.justkannada.in) : ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಕೊರೊನ ಪರಿಸ್ಥಿತಿ ನಿರ್ಲಕ್ಷಿಸಿದ್ದರಿಂದ ಆಟೋ, ಟ್ಯಾಕ್ಸಿ ಚಾಲಕರ ಬದುಕು ಬೀದಿಗೆ ಬಿದ್ದಿದೆ. ಹೀಗಿದ್ದರೂ, ಕಣ್ಣು, ಕಿವಿ, ಹೃದಯವಿಲ್ಲದ ಬಿಜೆಪಿ ಸರ್ಕಾರಗಳಿಗೆ ಅವರ ದುಃಸ್ಥಿತಿ ಕಾಣಿಸಲೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶವ್ಯಕ್ತಪಡಿಸಿದ್ದಾರೆ.jk-logo-justkannada-logo

ಕೋವಿಡ್ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್​ಡೌನ್ ಘೋಷಿಸಿ, ದೇಶದ ಜನರು ಸಹಕಾರ ನೀಡುವಂತೆ ಕೋರಿತು. ಅಂತೆಯೇ ದಿನದ ಬದುಕು ಕಳೆದುಕೊಳ್ಳುವ ಭೀತಿಯಲ್ಲಿಯೂ ಆಟೋ, ಟ್ಯಾಕ್ಸಿ ಚಾಲಕರು ಸಂಪೂರ್ಣ ಸಹಕಾರ ನೀಡಿದರು. ಹೀಗಿದ್ದರೂ ಕಣ್ಣು, ಕಿವಿ, ಹೃದಯ ಇಲ್ಲದ ಬಿಜೆಪಿ ಸರ್ಕಾರಗಳಿಗೆ ಅವರ ದುಃಸ್ಥಿತಿ ಕಾಣಿಸಲಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.BJP,government,without,eyes,ears,heart,D.K.Shivakumar,outrage

ಪ್ರತಿ ಚಾಲಕರಿಗೆ ತಿಂಗಳಿಗೆ 10,000 ಕೊಡುವಂತೆ ನಾವು ಮಾಡಿದ ಮನವಿಗೂ ಸರ್ಕಾರ ಸ್ಪಂದಿಸಲಿಲ್ಲ. ತಾವೇ ಘೋಷಿಸಿದಂತೆ  5000 ಹಣವನ್ನೂ ನೀಡಲಿಲ್ಲ. ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.

key words : BJP-government-without-eyes-ears-heart-D.K.Shivakumar- outrage