ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಇಂದು ಅಥವಾ ನಾಳೆ ಅಂತ್ಯ- ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್.

Promotion

ಮೈಸೂರು,ಜೂನ್,1,2022(www.justkannada.in):  ರಾಜ್ಯದಲ್ಲಿ ಉಂಟಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಇಂದು ಅಥವಾ ನಾಳೆ ಅಂತ್ಯ ಸಿಗಲಿದೆ. ಎಲ್ಲಾ ಸಮಸ್ಯೆಗಳನ್ನ ಮುಖ್ಯಮಂತ್ರಿಗಳು ಮುಕ್ತ ಮನಸ್ಸಿನಿಂದ ಆಲಿಸಿ ಬಗೆಹರಿಸುತ್ತಾರೆ ಎಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಮೈಸೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸುರೇಶ್ ಕುಮಾರ್,  ಸದ್ಯ ವಿವಾದ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿದೆ. ಶಿಕ್ಷಣ ಸಚಿವರ ಜೊತೆ ಮಾತನಾಡಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ‌. ಇಂದು ಅಥವಾ ನಾಳೆ ವಿವಾದಕ್ಕೆ ಅಂತ್ಯ ಸಿಗಲಿದೆ ಎಂದರು.

ಪಠ್ಯ ಪುಸ್ತಕದಿಂದ ಸಾಹಿತಿಗಳು ಹಿಂದೆ ಸರಿದ ವಿಚಾರ‌ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಕುಮಾರ್,  ಶಿಕ್ಷಣ ಸಚಿವರು ಎಲ್ಲಾ ಸಾಹಿತಿಗಳ ಭೇಟಿ ಮಾಡಿ ಮನವೊಲಿಸಲಿದ್ದಾರೆ‌. ಈಗಾಗಲೇ ನಿರ್ಮಲಾನಂದ ಶ್ರೀಗಳನ್ನ ಭೇಟಿಮಾಡಿ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ‌. ಮಕ್ಕಳಿಗೆ ತೊಂದರೆ ಆಗದಂತೆ ಶೀಘ್ರದಲ್ಲೇ ಪುಸ್ತಕ ನೀಡಲಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ ಎಂದು ತಿಳಿಸಿದರು.

Key words: textbook-revision-controversy-Former- Education- Minister -Suresh Kumar.