ಟೆಸ್ಟ್ ಕ್ರಿಕೆಟ್: ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ

Promotion

ಆಂಟಿಗುವಾ, ಆಗಸ್ಟ್ 23, 2019 (www.justkannada.in): ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೇ ಭಾರತ ವೈಫಲ್ಯ ಅನುಭವಿಸಿದೆ.

ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಅಜಿಂಕ್ಯ ರಹಾನೆ ಹಾಗೂ ಕೆ ಎಲ್ ರಾಹುಲ್​ರ ಸಮಯೋಚಿತ ಆಟದ ನೆರವಿನಿಂದ 6 ವಿಕೆಟ್ ಕಳೆದುಕೊಂಡು 203 ರನ್ ಕಲೆಹಾಕಿದೆ.

ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅಗ್ರ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈಚೆಲ್ಲಿದರು. ಆದರೆ ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್ ಭಾರತದ ಇನಿಂಗ್ಸ್‌ಗೆ ಆಧಾರವಾಗಿದ್ದಾರೆ.