ಕ್ರಿಕೆಟ್: ವಿಕ್ರಮ್ ರಾಥೋರ್ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್

ಮುಂಬೈ, ಆಗಸ್ಟ್ 23, 2019 (www.justkannada.in): ನಾಲ್ಕು ದಿನಗಳ ಕಾಲ ನಡೆಸಿದ ಸಂದರ್ಶನದಲ್ಲಿ ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್​ಗಳ ಹೆಸರನ್ನ ಪ್ರಕಟಿಸಿದ್ದಾರೆ.

ನಿರೀಕ್ಷೆಯಂತೆ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿ ಆಯ್ಕೆಯಾದ್ರೆ, ಆರ್.ಶ್ರೀಧರ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಬ್ಯಾಟಿಂಗ್ ಕೋಚ್​ ಹುದ್ದೆಗೆ ಡೊಮೆಸ್ಟಿಕ್ ಲೆಜೆಂಡ್ ವಿಕ್ರಮ್ ರಾಥೋರ್ ಹೆಸರು ಫೈನಲ್ ಮಾಡಿದೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್​ಗಳು, ಕೊಹ್ಲಿ ಸೈನ್ಯವನ್ನ ಸೇರಿಕೊಳ್ಳಲಿದ್ದಾರೆ.