ತೆಲುಗಿನ ಸಾಹೋ‌ ಚಿತ್ರಕ್ಕಾಗಿ ಕನ್ನಡ ಚಿತ್ರಗಳ ಎತ್ತಂಗಡಿ: ಕನ್ನಡಪರ ಸಂಘಟನೆಗಳಿಂದ ಆಕ್ರೋಶ…

Promotion

ಬೆಂಗಳೂರು,ಆ,29,2019(www.justkannada.in): ತೆಲುಗಿನ ಸಾಹೋ‌ ಚಿತ್ರಕ್ಕಾಗಿ ರಾಜ್ಯದ ಐನೂರು ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಗುತ್ತಿರುವ ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಪ್ರಭಾಸ್ ನಟನೆಯ ಸಾಹೋ ಚಿತ್ರಕ್ಕಾಗಿ ರಾಜ್ಯದ ಐನೂರು ಚಿತ್ರಮಂದಿರಗಳಲ್ಲಿ  ಪ್ರದರ್ಶನವಾಗುತ್ತಿರುವ ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡಲಾಗುತ್ತಿದೆ ಎಂದು ಕನ್ನಡಪರ ಸಂಘಟನೆಗಳು  ಆಕ್ರೋಶ ವ್ಯಕ್ತಪಡಿವೆ. ಕನ್ನಡ ಚಿತ್ರಗಳ ಮೇಲೆ ತೆಲುಗು ಚಿತ್ರದ ದರ್ಬಾರ್ ಖಂಡಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಂದು ಮತ್ತು ನಾಳೆ ಸಾಹೋ ಚಿತ್ರ ಬಿಡುಗಡೆಯಾಗಲಿದ್ದು, ಇದಕ್ಕಾಗಿ ಯಾವುದೇ ಕನ್ನಡ ಚಿತ್ರಗಳನ್ನು ಎತ್ತಂಗಡಿ ಮಾಡದಂತೆ ಕನ್ನಡಪರ ಸಂಘಟನೆಗಳು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿವೆ.

Key words: Telugu- films-Outrage – Kannada- organizations-bangalore