ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ರೆಡಿ..

ಬೆಂಗಳೂರು, ಜೂನ್ 24, 2022 (www.justkannada.in): ಟೀಂ ಇಂಡಿಯಾ ಆಂಗ್ಲರ ವಿರುದ್ಧದ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಾಗಿ ಭರ್ಜರಿ ತಯಾರಿ ಆರಂಭಿಸಿದೆ.

ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿ ಮುಗಿಸಿರುವ ಟೀಂ ಇಂಡಿಯಾ ಇದೀಗ ಇಂಗ್ಲೆಂಡ್‌ ನಲ್ಲಿ ಬೀಡುಬಿಟ್ಟಿದೆ.   4 ದಿನಗಳ ಟೆಸ್ಟ್ ಅಭ್ಯಾಸ ಪಂದ್ಯ ನಿನ್ನೆಯಿಂದಲೇ ಆರಂಭವಾಗಿದೆ. ಜುಲೈ 1 ರಂದು ಭಾರತ ಇಂಗ್ಲೆಂಡ್ ನಡುವಿನ ಬಾಕಿ ಉಳಿದ 5ನೇ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

ಕಳೆದ ವರ್ಷ ಆಯೋಜಿಸಿದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನಾಲ್ಕು ಪಂದ್ಯ ಮುಗಿಯುತ್ತಿದ್ದಂತೆ ಕೋವಿಡ್ ಆತಂಕ ಎದುರಾಗಿತ್ತು. ಹೀಗಾಗಿ 5ನೇ ಪಂದ್ಯವನ್ನು ಮುಂದೂಡಲಾಗಿತ್ತು.

ಜುಲೈ 1 ರಿಂದ 5ರ ವರೆಗೆ ಭಾರತ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ನಡೆಯಲಿದೆ. ಟೆಸ್ಟ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನಾ 3.30ಕ್ಕೆ ಆರಂಭಗೊಳ್ಳಲಿದೆ.

ಜುಲೈ 7 ರಿಂದ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಜುಲೈ 7 ರಂದ ಸೌಥಾಂಪ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯ ರಾತ್ರಿ 11.ಗಂಟೆಗೆ ಆರಂಭಗೊಳ್ಳಲಿದೆ.