ಟಿ-20 ವಿಶ್ವಕಪ್ ಗೆ ಟೀಮ್ ಇಂಡಿಯಾ ಪ್ರಕಟ: ಬೂಮ್ರಾ, ಹರ್ಷಲ್ ಪಟೇಲ್ ಕಮ್ ಬ್ಯಾಕ್.

Promotion

ನವದೆಹಲಿ,ಸೆಪ್ಟಂಬರ್,12,2022(www.justkannada.in): ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್ ​ಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ.

ಬಿಸಿಸಿಐ ಆಯ್ಕೆ ಮಂಡಳಿ ಸಾಕಷ್ಟು ಚರ್ಚೆಯ ನಂತರ 15 ಆಟಗಾರರನ್ನು ಚುಟುಕು ಸಮರಕ್ಕೆ ಆಯ್ಕೆ ಮಾಡಿದ್ದು ಏಷ್ಯಾಕಪ್ ನಲ್ಲಿ ಹೊರಗುಳಿದಿದ್ದ ಜಸ್ಪ್ರಿತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಕಮ್ ಬ್ಯಾಕ್ ಮಾಡಿದ್ದಾರೆ.

ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಟಿ20 ವಿಶ್ವಕಪ್​ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿದೆ. ಟಿ-20 ವಿಶ್ವಕಪ್‌ ಗೆ  ಭಾರತ ತಂಡದ ನಾಯಕರಾಗಿ ರೋಹಿತ್ ಶರ್ಮಾ, ಉಪನಾಯಕರಾಗಿ ಕನ್ನಡಿಗ ಕೆ.ಎಲ್ ರಾಹುಲ್​ ಆಯ್ಕೆಯಾಗಿದ್ದಾರೆ.

ಆರಂಭದಲ್ಲಿ ಈ ವಾರದ ಕೊನೆಯಲ್ಲಿ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು, ಆಯ್ಕೆದಾರರು  ಸಭೆ ಸೇರಿ ಆಸ್ಟ್ರೇಲಿಯಾದಲ್ಲಿ  ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನ ಪ್ರತಿನಿಧಿಸುವ 15 ಜನರ ತಂಡವನ್ನ ಅಂತಿಮಗೊಳಿಸಿದರು.

ಐಸಿಸಿ ಟಿ20 ವಿಶ್ವಕಪ್ 2022 ಭಾರತ ತಂಡ  ಹೀಗಿದೆ : 

ರೋಹಿತ್ ಶರ್ಮಾ (C), ಕೆಎಲ್ ರಾಹುಲ್ (VC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ,  ರಿಷಬ್  ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Key words: Team India-announced – T-20 World Cup