ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡ ಪೊಲೀಸರ ಬಲೆಗೆ

Promotion

ಬೆಂಗಳೂರು, ಮಾರ್ಚ್ 7, 2020 (www.juskannada.in): ಹಳೆ ವಿಡಿಯೋ ಇಟ್ಟುಕೊಂಡು ವಿನಯ್ ಗುರೂಜಿಗೆ ಬೆದರಿಕೆ ಹಾಕುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ರವಿಕುಮಾರ್, ಮುನಿರಾಜು, ಮನೋಜ್, ಮುರಳಿ, ಸಂತೋಷ್ ಬಂಧಿತರು. ಈ ಐವರು ವಿನಯ್ ಗುರೂಜಿಯ ಹಳೆ ವಿಡಿಯೋ ಇಟ್ಟುಕೊಂಡು, ಕಾವೇರಿ ಎನ್ನುವ ಯೂಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡಿ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.

ಇನ್ನು ಘಟನೆ ಸಂಬಂಧ ವಿನಯ್ ಗುರೂಜಿ ಆಪ್ತ ಪ್ರಶಾಂತ್ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.