ಬೈ ಎಲೆಕ್ಷನ್ ಕರ್ತವ್ಯದ ವೇಳೆ ಕೊರೋನಾಗೆ ಶಿಕ್ಷಕರು ಬಲಿ: ಇದಕ್ಕೆ ಆಡಳಿತ ನಡೆಸುವವರೇ ಹೊಣೆ ಎಂದ ಡಿ.ಕೆ ಶಿವಕುಮಾರ್…

ಬೆಂಗಳೂರು,ಮೇ,15,2021(www.justkannada.in):  ಬೈ ಎಲೆಕ್ಷನ್ ಕರ್ತವ್ಯದ ವೇಳೆ ಕೊರೋನಾಗೆ ಶಿಕ್ಷಕರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೆ ಆಡಳಿತ ನಡೆಸುವವರೇ ಹೊಣೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇದು ನಮ್ಮ ಸ್ವಯಂಕೃತ ಅಪರಾಧ. ಆಡಳಿತ ನಡೆಸುವವರೇ ಇದಕ್ಕೆ ಹೊಣೆ. ಉಪಚುನಾವಣೆ ವೇಳೆ ಎಲ್ಲರೂ ಜಾಗೃತಿ ವಹಿಸಬೇಕಿತ್ತು. ಯಾವ ಪಕ್ಷದವರೂ ಸರಿಯಾಗಿ ಅಂತರ ಕಾಪಾಡಲಿಲ್ಲ. ನಾನು ಪ್ರಯತ್ನಿಸಿದೆ. ಆದರೆ ಜನರ ಜಂಜಾಟ ಹೆಚ್ಚಾಗಿತ್ತು. ಸರ್ಕಾರ ಚುನಾವಣೆ ಬೇಡ ಎಂದಿದ್ದರೇ ಚುನಾವಣಾ ಆಯೋಗ ಏನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗಲಾದ್ರೂ ಎಚ್ಚೆತ್ತುಕೊಳ್ಳಬೇಕು ಎಂದರು.Teachers –death- Corona-KPCC-president-DK Sivakumar - responsible - Government

ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಸಂಖ್ಯೆ ಕಡಿಮೆ ಮಾಡುತ್ತಿದ್ದಾರೆ. ಲಾಕ್ ಡೌನ್ ವಿಚಾರದಲ್ಲಿ ನಾವು ಮೂಗು ತೂರಿಸುವುದಿಲ್ಲ. ಲಾಕ್ ಡೌನ್ ವಿಚಾರವನ್ನ ಸರ್ಕಾರಕ್ಕೆ ಬಿಡ್ತೇವೆ. ಆಗಂತ ಮಾಡಿದ ತಪ್ಪು ತಿದ್ಧಿಕೊಳ್ಳದಿದ್ದರೇ ಸುಮ್ನೆ ಇರುವುದಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

ENGLISH SUMMARY…

Death of teachers on byelection duty due to COVID pandemic: KPCC President DKS holds State Govt. responsible
Bengaluru, May 15, 2021 (www.justkannada.in): KPCC President D.K. Shivakumar said that the State Government is directly responsible for the death of the teachers who attended by-elections duty died of the COVID pandemic.Teachers –death- Corona-KPCC-president-DK Sivakumar - responsible - Government
Speaking to the press persons today in Bengaluru regarding this D.K. Shivakumar observed that it is our self-committed mistake. “The Govt. is directly responsible for their death. Everyone should have been careful during the byelections. None of the parties maintained social distancing properly. I also tried, but the crowd was huge. If the government would have canceled it even the Election Commission wouldn’t have done anything. At least we should be cautious now,” he added.
“We won’t interfere in the lockdown issue, we will leave it to the govt to decide. But we won’t keep quiet if it won’t rectify its mistake,” he said.
Keywords: KPCC President/ D.K. Shivakumar/ State Govt./ directly responsible/ death of teachers/ byelection duty

Key words: Teachers –death- Corona-KPCC-president-DK Sivakumar – responsible – Government