BREAKING NEWS : ಶಿಕ್ಷಕರ ಕೌನ್ಸೆಲಿಂಗ್ ವರ್ಗಾವಣೆಗೆ ತಡೆ : ಆ ಮೂಲಕ ಗೊಂದಲ ನಿವಾರಣೆಗೆ ಮುಂದಾದ ಶಿಕ್ಷಣ ಸಚಿವ ಸುರೇಶ್ ಕುಮಾರ್.

kannada t-shirts

 

ಬೆಂಗಳೂರು, ಆ.28, 2019 : ( www.justkannada.in news ) ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ವರ್ಗಾವಣೆಯಲ್ಲಿರುವ ಗೊಂದಲ ನಿವಾರಣೆಗಾಗಿ ವರ್ಗಾವಣೆ ಪ್ರಕ್ರಿಯೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ತಡೆ ಹಿಡಿಯಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

ಈ ಸಂಬಂಧ ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಆದೇಶ ( ಪ್ರಾ.ಪ್ರೌ.ಸ 18/2019 ) ಹೊರಡಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಪರಿಣಾಮ ನಾಳೆಯಿಂದ ನಡೆಯ ಬೇಕಿದ್ದ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ಸ್ಥಗಿತಗೊಂಡಿದೆ.

ಏನಿದು ಗೊಂದಲ :

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಸರಕಾರ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ಮುಂದಾಯಿತು. ಇದರಲ್ಲಿ 10 ವರ್ಷ ಸೇವೆ ಪೂರೈಸಿರುವ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡುವುದು ಸೇರಿತ್ತು. ಆದರೆ ಕೆಲ ಪಟ್ಟಭದ್ರರ ಕಾರಣದಿಂದ, ಕಡ್ಡಾಯ ವರ್ಗಾವಣೆ ಮಾರ್ಗಸೂಚಿಗೆ ನಿಯಮ ಬಾಹಿರವಾಗಿ ಬದಲಾವಣೆ ತರಲಾಯಿತು. ಇದರಿಂದ ಕಡ್ಡಾಯ ವರ್ಗಾವಣೆಯಲ್ಲಿ ‘ವಿನಾಯಿತಿ’ ಸವಲತ್ತು ಪಡೆಯುವವರು ಹೆಚ್ಚಾದರು.
ಕಡ್ಡಾಯ ವರ್ಗಾವಣೆ ವಿನಾಯಿತಿಗಳು:
1) ಶಿಕ್ಷಕರ ಸಂಘದ ಪದಾಧಿಕಾರಿಗಳು 6 ಮಂದಿ 2) ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು 3 ಮಂದಿ
3) ವಿಧವಾ ಮಹಿಳಾ ಶಿಕ್ಷಕಿಯರು #,5% , 4) ಅವಿವಾಹಿತ ಮಹಿಳಾ ಶಿಕ್ಷಕಿಯರು # 10% , 5) 40% ಗಿಂತ ಹೆಚ್ಚು ಅಂಗವೈಕಲ್ಯತೆ # 10% , 6) ವೈದ್ಯಕೀಯ ಕಾರಣ ಸುಮಾರು #5%, 7) ಪತಿ ಪತ್ನಿ ಪ್ರಕರಣ ಸುಮಾರು 50%, 8) ನಿವೃತ್ತಿಗೆ 2 ವರ್ಷ ಇರುವವರು 5% . ಇದರಿಂದ ಅಂದಾಜು ಶೇ 85 ರಷ್ಟು A ವಲಯ ಶಿಕ್ಷಕರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಸಿಎಂಗೂ ಮನವಿ :

ಉಳಿದ 15% ಶಿಕ್ಷಕರು ಏನು ಮಾಡಿದ್ದಾರೆ ಅವರಿಗೆ ಮಾತ್ರವೇ ಕಡ್ಡಾಯ ವರ್ಗಾವಣೆ ಶಿಕ್ಷೆಯೇ ಎಂಬುದು ಉಳಿದವರ ಅಳಲು. ಹಾಗಾದರೆ ವರ್ಗಾವಣೆ ಬಯಸಿ ಅರ್ಜಿ ಹಾಕಿರುವ 70000 ಶಿಕ್ಷಕರ ಪಾಡೇನು .?, ನಗರಕ್ಕೆ ಬರುವ ಗ್ರಾಮೀಣ ಶಿಕ್ಷಕರ ಕನಸು ಗಗನ ಕುಸುಮವೇ ಸರಿ. ದಯಮಾಡಿ ಅನ್ಯಾಯಕ್ಕೆ ಒಳಗಾಗುತ್ತಿರುವ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೂ ಮನವಿ ಮಾಡಲಾಗಿತ್ತು.

ಕಡ್ಡಾಯ ವರ್ಗಾವಣೆ ಅನ್ನೋದು ಎಲ್ಲರಿಗೂ ಆಗಲಿ. ಯಾರು A ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿರುತ್ತಾರೋ ಅವರು ಸಿನಿಯಾರಿಟಿ ಪ್ರಕಾರ ಸಿ ಮತ್ತು ಬಿ ವಲಯಕ್ಕೆ ವರ್ಗಾವಾಗಬೇಕು. 2017 ರಲ್ಲಿ ಇದೇ ನಿಯಮದ ಮೇಲೆ ವರ್ಗಾವಣೆ ನಡೆಸಿದ್ದು. ಆದರೆ, ಶಿಕ್ಷಣ ಕ್ಷೇತ್ರದ ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಡ್ಡಾಯ ವರ್ಗಾವಣೆಯಲ್ಲಿ ವಿನಾಯತಿ ಸೇರ್ಪಡೆಗೊಳಿಸಲಾಯಿತು. ಪ್ರಮುಖವಾಗಿ ಕಪಲ್ ಕೇಸ್ ( ಪತಿ-ಪತ್ನಿ) ಪ್ರಕರಣ. ಪರಿಣಾಮ ನಾನ್ ಕಪಲ್ ಮಾತ್ರ ಸಿ ವಲಯಕ್ಕೆ ಹೋಗಬೇಕೆ.? ಇದು ಸಹಜ ನ್ಯಾಯಕ್ಕೆ ವಿರುದ್ಧವಾದದ್ದು ಎಂದು ಅನ್ಯಾಯಕ್ಕೊಳಗಾದ ಶಿಕ್ಷಕರು ಅಳಲು ತೋಡಿಕೊಂಡಿದ್ದರು.

ನಾನ್ ಕಪಲ್ ಗಳು ಎರಡು ಸಂಬಳ ತಗೋತಾ ಇಲ್ಲ. ಜತೆಗೆ ನಾವೇನು ಟಾಟಾ ಬಿರ್ಲಾ ನ ಮದುವೆ ಆಗಿಲ್ಲ. ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಕೆಲ ಶಿಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ತಾರತಮ್ಯದ ಬಗ್ಗೆ ಜೋರಾಗೆ ಧ್ವನಿ ಎತ್ತಿದ್ದರು.

 

key words : teachers-counseling-transfer-stopped-minister-sureshkumar-issues-order

website developers in mysore