‘ ಹೈ-ಡ್ರಾಮ ‘ ನಡುವೆಯೇ ನಾಳೆಯಿಂದಲೇ ಶಿಕ್ಷಕರ ವರ್ಗಾವಣೆ ಘೋಷಿಸಿದ ಸಚಿವ ಸುರೇಶ್ ಕುಮಾರ್

Promotion

 

ಬೆಂಗಳೂರು, ಸೆ.03, 2019 : ಸಾಕಷ್ಟು ವಿವಾದಗಳಿಗೆ, ಗೊಂದಲಗಳಿಗೆ ಗುರಿಯಾಗಿ ತಾತ್ಕಾಲಿಕ ಸ್ಥಗಿತಗೊಂಡಿದ್ದ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮತ್ತೆ ನಾಳೆಯಿಂದಲೇ ಪುನಾರಂಭಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸಚಿವ ಸುರೇಶ್​ ಕುಮಾರ್​ ಸೂಚನೆ ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸುರೇಶ್​ ಕುಮಾರ್​ ಹೇಳಿದಿಷ್ಟು….

ತಾತ್ಕಾಲಿಕವಾಗಿ ನಿಲ್ಲಿಸಿದ್ದ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಗೆ ನಾಳೆಯಿಂದ ಪ್ರಾರಂಭ. 2019-20ನೇ ಸಾಲಿನ ವರ್ಗಾವಣೆ ವೇಳೆಗೆ ಶಿಕ್ಷಕ ಸ್ನೇಹಿ ವರ್ಗಾವಣೆ ವ್ಯವಸ್ಥೆ. ಕಡ್ಡಾಯ ವರ್ಗಾವಣೆ ಕಾಯ್ದೆಗೆ ಸೂಕ್ತ ತಿದ್ದುಪಡಿ. ಕಡ್ಡಾಯ ಮತ್ತು ಪರಸ್ಪರ ವರ್ಗಾವಣೆಗೆ ನಾಳೆಯಿಂದ ಕೌನ್ಸೆಲಿಂಗ್ ಆರಂಭ. ಸೆಪ್ಟೆಂಬರ್ ಅಂತ್ಯಕ್ಕೆ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣ.
ಕಡ್ಡಾಯ ವರ್ಗಾವಣೆಗೆ ಕೋರ್ಟ್​ ತಡೆ ನೀಡಿಲ್ಲ. 2007ರ ನಿಯಮದಂತೆ ಕಡ್ಡಾಯ ವರ್ಗಾವಣೆ.

ಪರ-ವಿರುದ್ಧದ ಹೈ-ಡ್ರಾಮ :
ಸಚಿವ ಸುರೇಶ್ ಕುಮಾರ್, ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಂಗ್ ಪ್ರಕ್ರಿಯೆ ನಾಳೆಯಿಂದಲೇ ಮರು ಪ್ರಾರಂಭಿಸಲಾಗುತ್ತದೆ ಎಂದು ಘೋಷಿಸುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲ ಶಿಕ್ಷಕರು ಕಣ್ಣೀರುಗರೆಯುತ್ತಾ, ನಮಗೆ ಅನ್ಯಾಯವಾಗಿದೆ. ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಸರಕಾರಿ ನೌಕರರ ಹಾಗೂ ಶಿಕ್ಷಕ ಸಂಘದ ಕೆಲ ಪ್ರಭಾವಿಗಳ ಒತ್ತಡಕ್ಕೆ ಸಚಿವರು ಮಣಿಯಬಾರದು ಎಂದು ಗೋಳಾಡಿದರು.
ಇದೇ ವೇಳೆ ಸ್ಥಳದಲ್ಲಿದ್ದ ಮತ್ತೆ ಕೆಲ ಶಿಕ್ಷಕರು ವರ್ಗಾವಣೆ ಸ್ಥಗಿತಗೊಳಿಸಿದರೆ ನಾವೂ ವಿಷ ಕುಡಿಯಬೇಕಾಗುತ್ತದೆ ಎಂದು ಸಚಿವರ ಬಳಿ ಅಲವತ್ತುಕೊಂಡ ಘಟನೆ ನಡೆದಿದೆ.

key words : teacher-transfer-high-drama-bangalore-sureshkumar