ಕೊರೊನಾ ಟೆಸ್ಟಿಂಗ್ ಮಾಡಿಸಿ ಜನಪ್ರತಿನಿಧಿಗಳಿಗೆ ಮಾದರಿಯಾದ ಶಾಸಕ ತನ್ವೀರ್ ಸೇಠ್

Promotion

ಮೈಸೂರು, ಏಪ್ರಿಲ್ 25, 2021 (www.justkannada.in): ಮುನ್ನೆಚ್ಚರಿಕೆಯಾಗಿ ಕೊರೊನಾ ಟೆಸ್ಟಿಂಗ್ ಮಾಡಿಸಿ ಉಳಿದೆ ಜನಪ್ರತಿನಿಧಿಗಳಿಗೆ ಶಾಸಕ ತನ್ವೀರ್ ಸೇಠ್ ಮಾದರಿಯಾಗಿದ್ದಾರೆ.

ಮೇಟಗಳ್ಳಿ ಕೋವಿಡ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ತಪಾಸಣೆಗೊಳಪಟ್ಟ ಶಾಸಕ ತನ್ವೀರ್ ಸೇಠ್, ಇತ್ತೀಚೆಗೆ ಜನಪ್ರತಿನಿಧಿಗಳಲ್ಲಿಯೂ ಸಹ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಟೆಸ್ಟ್ ಮಾಡಿಕೊಂಡರು.

ಸ್ವಯಂಪ್ರೇರಿತರಾಗಿ ತಪಾಸಣೆಗೊಳಪಟ್ಟ ಶಾಸಕ ತನ್ವೀರ್ ಸೇಠ್, ಜನಪ್ರತಿನಿಧಿಯಾಗಿ ಸಾಮಾಜಿಕ ಜವಾಬ್ದಾರಿ ಮೆರೆದರು. ವರದಿ ಬರುವವರೆಗೂ ಆಸ್ಪತ್ರೆಯಲ್ಲೇ ಕಾದು ಕುಳಿತ ತನ್ವೀರ್ ಸೇಠ್ ಪ್ರಾಥಮಿಕ ರ್ಯಾಪಿಡ್ ಆಂಟಿಜನ್ ಟೆಸ್ಟ್ ನಲ್ಲಿ ತನ್ವೀರ್ ಸೇಠ್ ಗೆ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂತು.

ಬೆಂಬಲಿಗರು ಹಾಗೂ ಅಭಿಮಾನಿಗಳಲ್ಲಿ ಸಮಾಧಾನ ತಂದ ತನ್ವೀರ್ ಕೋವಿಡ್ ನೆಗೆಟಿವ್ ವರದಿ, ಸಾರ್ವಜನಿಕರಿಗೂ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.45 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳುವಂತೆ ತನ್ವೀರ್ ಸೇಠ್ ಮನವಿ ಮಾಡಿದರು.