ತಮಿಳು ಸಿನಿಮಾದ ಕಾಮೆಡಿಯನ್ ‘ ಕ್ರೇಜಿ’ ಮೋಹನ್ ನಿಧನ

Promotion

 

ಚೆನ್ನೈ, ಜೂ.10, 2019 : (www.justkannada.in news) : ತಮಿಳು ಹಾಸ್ಯ ನಟ, ಚಿತ್ರಕಥೆಗಾರ 67 ವರ್ಷದ ಕ್ರೇಜಿ ಮೋಹನ್, ಹೃದಯಘಾತದಿಂದ ಮೃತಪಟ್ಟರು.

ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಮೋಹನ್, ಹೃದಯಘಾತದಿಂದ ಮೃತಪಟ್ಟರು ಎಂದು ಇಂದು ಮಧ್ಯಾಹ್ನ ವೈದ್ಯರು ಪ್ರಕಟಿಸಿದರು. ತಮಿಳಿನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಮೋಹನ್, ರಂಗಭೂಮಿ ಹಿನ್ನೆಲೆಯವರು. ನಟನೆ ಮಾತ್ರವಲ್ಲದೆ ಸಂಭಾಷಣೆ, ಚಿತ್ರಕಥೆ ರಚನೆಯಲ್ಲೂ ಎತ್ತಿದ ಕೈ.

ಇವರ ಮೂಲ ಹೆಸರು ಮೋಹನ್ ರಂಗಾಚಾರಿ. ಆದರೆ `ಕ್ರೇಜಿ ಥೀವ್ಸ್ ಇನ್ ಪಾಲವಕ್ಕಂ’ ನಾಟಕದಲ್ಲಿ ಮೋಹನ್ ಜನಪ್ರಿಯತೆ ಪಡೆದ ಮೇಲೆ ಅವರ ಹೆಸರಿನ ಹಿಂದೆ ಕ್ರೇಜಿ ಸೇರಿಕೊಂಡಿತು.
———

Tamil playwright and artist ‘Crazy’ Mohan dies at 67 in chennai today

Crazy’ Mohan, prominent Tamil theatre artiste, and ace scriptwriter for Tamil films, suffered an acute heart attack in Chennai, and was declared dead at 2 p.m., after efforts to resuscitate him at Kauvery Hospital failed. He was 67.

Born in 1952, as Mohan Rangachari, ‘Crazy’ was a nom de plume that he acquired after the popular play ‘Crazy Thieves in Palavakkam’ for which he wrote the script. The play staged by S.Ve. Shekher was also run on television as a series, became a runaway hit.