ರಿಯಲ್ ಸ್ಟಾರ್ ಉಪೇಂದ್ರ ಚಿತ್ರಕ್ಕೆ ತಮನ್ನಾ ನಾಯಕಿ ?!

Promotion

ಬೆಂಗಳೂರು, ಜೂನ್ 28, 2022 (www.justkannada.in): ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ ನ ಮುಂದಿನ ಚಿತ್ರದ ನಾಯಕಿ ಯಾರು ಎಂಬ ಪ್ರ‍ಶ್ನೆ ಉತ್ತರ ಸಿಗುವ ಕಾಲ ಬಂದಿದೆ.

ಚಿತ್ರದ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಿದ್ದಾರೆ ಅನ್ನೋ ಪ್ರಶ್ನೆ ಈಗ ಗಾಂಧಿನಗರದಲ್ಲಿ ಸಾಕಷ್ಟು ಓಡಾಡ್ತಿದೆ.

ಕೆಜಿಎಫ್ ಚಾಪ್ಟರ್ 1 ನಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಕುಣಿದಿದ್ದ ತಮನ್ನಾಅವರನ್ನು ನಾಯಕಿಯಾಗಿ ಕರೆತರಲು ಉಪ್ಪಿ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕೆಜಿಎಫ್ ಚಿತ್ರದಲ್ಲಿ ರೀನಾ ಪಾತ್ರದಲ್ಲಿ ಮಿಂಚಿದ ಶ್ರೀನಿಧಿ ಶೆಟ್ಟಿಯೂ ರೇಸ್ ನಲ್ಲಿದ್ದಾರೆ. ಆದರೆ ತಮನ್ನಾ ಮೇಲೆ ಉಪ್ಪಿ ಒಲವು ಜಾಸ್ತಿ ಇದೆ ಎನ್ನುತ್ತಿವೆ ಆಪ್ತ ಮೂಲಗಳು.

ಇವರಿಬ್ಬರಲ್ಲಿ ಒಬ್ಬರನ್ನು ಚಿತ್ರಕ್ಕೆ ಕರೆತರಲು ಉಪ್ಪಿ ಟೀಮ್ ಜೊತೆ ಮಾತನಾಡಿದ್ದು, ಇಬ್ಬರಲ್ಲಿ ಯಾರು ಉಪ್ಪಿಯ ಪ್ಯಾನ್ ಇಂಡಿಯಾ ಚಿತ್ರಕ್ಕೆ ಫೈನಲ್ ಆಗ್ತಾರೆ ಎಂಬ ಪ್ರಶ್ನೆ ಕುತೂಹಲ ಮೂಡಿಸಿದೆ.