‘ಆಪರೇಷನ್ ಕಮಲ’ ಬಗ್ಗೆ ಸದನದದಲ್ಲಿ ಚರ್ಚೆ: ಬಿಜೆಪಿ ವಿರುದ್ದ ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ…

Promotion

ಬೆಂಗಳೂರು,ಜು,22,2019(www.justkannada.in): ವಿಶ್ವಾಸಮತಯಾಚನೆ ವಿಳಂಬ ಮಾಡುವುದು ಅನೈತಿಕ. ಆಗಾದ್ರೆ ಅಪರೇಷನ್ ಕಮಲ ನೈತಿಕವಾ  ಎಂದು ಬಿಜೆಪಿ ವಿರುದ್ದ ಸಚಿವ ಕೃಷ್ಣೇಭೈರೇಗೌಡ ಕಿಡಿಕಾರಿದರು.

ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾಪ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವ ಕೃಷ್ಣೇಭೈರೇಗೌಡ, ಶಾಸಕರು ರಾಜೀನಾಮೆ ಏಕೆ ನೀಡಿದ್ರು. ಉದ್ದೇಶವೇನು ಎಂಬುದರ ಬಗ್ಗೆ ಚರ್ಚೆಯಾಗಬೇಕು.  ಈ ನಡುವೆ ಬಿ.ಸಿ ಪಾಟೀಲ್  ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಮಂತ್ರಿ ಸ್ಥಾನ ಸಿಗದಕ್ಕೆ ಬೇಸರಗೊಂಡಿದ್ದರು.  ಬಿಸಿ ಪಾಟೀಲ್ ಒಬ್ಬರ ಜತೆ ಸಂಭಾಷಣೆ ಮಾಡಿದ ಆಡಿಯೋ ಇದೆ. ಅದರಲ್ಲಿ ಸಂಭಾಷಣೆ ಮಾಡಿದ್ದು ಅವರು ಯಾರು ಅಂತಾ ಹೇಳೋದು ಬೇಡ. ಸಂಭಾಷಣೆ ವೇಳೇ  ಬಿಜೆಪಿಗೆ ಬರುವಂತೆ ಕೋಟಿ ಕೋಟಿ ಹಣದ ಆಫರ್ ನೀಡಿದ್ದಾರೆ. ಈ ಮೂಲಕ ನಮ್ಮ ಶಾಸಕರನ್ನ ಸೆಳೆಯಲು ಯತ್ನಿಸಿದ್ದಾರೆ. ಇದಕ್ಕೆಲ್ಲಾ ದಾಖಲೆ ಕೊಡುತ್ತೇನೆ ಎಂದರು.

ಹಾಗೆಯೇ ಅತೃಪ್ತ ಶಾಸಕರ ಕುಟುಂಬದ ಜತೆ ಬಿಜೆಪಿ ಸಂಭಾಷಣೆ ನಡೆಸಿದೆ.  ರಮೇಶ್ ಜಾರಕಿಹೊಳಿ ಕಳೆದ ಏಳು ಎಂಟು ತಿಂಗಳಿಂದ  ಬಿಜೆಪಿ ಜತೆ ಸಂಪರ್ಕದಲ್ಲಿದ್ದರು.ಅವರ ಜತೆ ಬಿಜೆಪಿ ನಾಯಕರು ಭೇಟಿ ಮಾಡಿ ವ್ಯವಹಾರ ಮಾಡಿದ್ದಾರೆ. ಕಳೆದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಆದರೇ ಶಾಸಕರ ರಾಜೀನಾಮೆಗೂ ನಮಗೂ ಯಾವುದೇ ಸಂಬಂಧವಿಲ್ಲ ವಿಶ್ವಾಸಮತಯಾಚನೆಯಷ್ಟೇ ನಮ್ಮ ಉದ್ದೇಶ ಎಂದು ಬಿಜೆಪಿಯವರು ಹೇಳಿದ್ದಾರೆ. ಇಂತಹ  ಬಿಜೆಪಿನಾಯಕರು ಈಗಲೇ ವಿಶ್ವಾಸಮತಯಾಚನೆಗೆ ಒತ್ತಾಯಿಸುತ್ತಿದ್ದಾರೆ. ಆದರೆ ಅವರಿಗೆ ನೈತಿಕತೆ ಇದೆಯಾ..? ಎಂದು ಪ್ರಶ್ನಿಸಿದರು.

ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ , ಶಾಸಕ ಬಿ.ಸಿ ಪಾಟೀಲ್ ಸದನದಲ್ಲಿ ಇಲ್ಲ. ಹೀಗಾಗಿ ಅವರ ಬಗ್ಗೆ ಪ್ರಸ್ತಾಪ ಬೇಡ ವೆಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಜಗದೀಶ್ ಶೆಟ್ಟರ್ ಗೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್ , ಅವರ್ಯಾರು ಜನರಿಂದ ಆಯ್ಕೆಯಾಗಿ ಬಂದಿಲ್ಲವಾ..? ಸದನಕ್ಕೆ ಬಾರದ ಸದಸ್ಯರು ಅನಾಥರಲ್ಲ ಸದನಕ್ಕೆ ಬಂದು ಸಮರ್ಥಿಸಿಕೊಳ್ಳಬಹುದು ಎಂದು ತಿಳಿಸಿದರು.

ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಎಸ್ ವೈ ಹೇಳಿದ್ದಾರೆ. ಮಾಧ್ಯಮಗಳಲ್ಲೇ ಹೇಳುತ್ತಿದ್ದಾರೆ. ಸಂಪರ್ಕದಲ್ಲಿದ್ದಾರೆಂದು ವಿಪಕ್ಷ ನಾಯಕರು ಮತ್ತು ಉದಾಸಿ ಹೇಳಿದ್ದಾರೆ ಎಂದು ಸಚಿವ ಕೃಷ್ಣೇಭೈರೇಗೌಡ ಆರೋಪಿಸಿದರು.

Key words: Talk -Operation Audio-session- Minister -Krishna Bhairagauda- against – BJP.