ಸದನದಲ್ಲೂ ಕೊರೋನಾ ವೈರಸ್ ಬಗ್ಗೆ ಚರ್ಚೆ: ಕರೋನಾ ವೈರಸ್ ಬಗ್ಗೆ ಮಾಹಿತಿ ನೀಡಿದ ಸಚಿವ ಡಾ.ಕೆ.ಸುಧಾಕರ್…

Promotion

ಬೆಂಗಳೂರು,ಮಾ,9,2020(www.justkannada.in):  ವಿಶ್ವದಲ್ಲಿ ಹರಡಿರುವ ಮಹಾಮಾರಕ ಕರೋನಾ ವೈರಸ್ ಭೀತಿ ಎಲ್ಲಡೆ ಕಾಡುತ್ತಿದೆ. ಈ ನಡುವೆ ಕೊರೋನಾ ವೈರಸ್ ಬಗ್ಗೆ ರಾಜ್ಯ ವಿಧಾನಸಭೆಯಲ್ಲೂ ಚರ್ಚೆಯಾಗುತ್ತಿದೆ.

ವಿಧಾನಸಭಾ ಕಲಾಪದಲ್ಲೂ ಕರೋನಾ ವೈರಸ್ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಲಾಗುತ್ತಿದೆ. ಕರೋನಾ ವೈರಸ್ ತಪಾಸಣಾ ಕೇಂದ್ರವನ್ನ ತೆರೆಯುವಂತೆ ಕಾಂಗ್ರೆಸ್ ಶಾಸಕ ಡಾ.ಯತೀಂದ್ರ ಸದನದಲ್ಲಿ ಆಗ್ರಹಿಸಿದರು.  ಬೆಂಗಳೂರಿನ ವಿಕ್ಟೋರಿಯಾ, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಮಾತ್ರ ಕರೋನಾ ವೈರಸ್ ತಪಾಸಣೆ ಮಾಡಲಾಗುತ್ತಿದೆ. ಹೀಗಾಗಿ ಮಂಗಳೂರು ಕಡಲ ಕಿನಾರೆ ಜಿಲ್ಲೆಗಳಲ್ಲೂ ಕರೋನಾ ವೈರಸ್ ತಪಾಸಣಾ ಕೇಂದ್ರ ಪ್ರಾರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಸದನದಲ್ಲಿ ಮಾತನಾಡಿ ಕರೋನಾ ವೈರಸ್ ಬಗ್ಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರೋನಾ ವೈರಸ್ ಚೀನಾದಿಂದ ಪ್ರಾರಂಭವಾಗಿದೆ. ದೇಶದಲ್ಲಿ 30 ಮಂದಿಗೆ ಕರೋನಾ ಸೋಂಕು ಪತ್ತೆಯಾಗಿದೆ.  ಕೇರಳಾದಲ್ಲಿ ಮೂರು, ದೆಹಲಿ, ಹೈದರಾಬಾದ್ ನಲ್ಲಿ 1 ಕೊರೋನಾ ಸೋಂಕು ಪತ್ತೆಯಾಗಿದೆ. ಆದರೆ ರಾಜ್ಯದಲ್ಲಿ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.

ಹಾಗೆಯೇ ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಜ್ಯದ ಎಲ್ ಕೆಜಿ, ಯುಕೆಜಿ, ನರ್ಸರಿ ಶಾಲಾ ಮಕ್ಕಳಿಗೆ ಈ ತಿಂಗಳು ರಜೆ ಘೋಷಣೆ ಮಾಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Key words: Talk -coronavirus – session-minister-Dr K Sudhakar