ಬಿಸಿಯೂಟ ನೌಕರರಿಗೆ ಸಿಹಿಸುದ್ದಿ: ಕೇಂದ್ರಕ್ಕೆ ಪತ್ರ ಬರೆದ ಶಿಕ್ಷಣ ಸಚಿವ ಸುರೇಶ್ ಕುಮಾರ್…

ಬೆಂಗಳೂರು,ಮಾ,9,2020(www.justkannada.in): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಧ್ಯಾಹ್ನ ಬಿಸಿಯೂಟ ಯೋಜನೆ ನೌಕರರಿಗೆ ಸಿಹಿಸುದ್ದಿ ನೀಡಿದ್ದಾರೆ. ಬಿಸಿಯೂಟ ನೌಕರರ  ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕೇಂದ್ರಕ್ಕೆ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಗೆ ಪತ್ರ ಬರೆದಿರುವ ಸಚಿವ ಸುರೇಶ್ ಕುಮಾರ್, ರಾಜ್ಯದಲ್ಲಿ 46,768 ಅಡುಗೆಯವರು ಮತ್ತು 71,159 ಸಹಾಯಕರು ಸೇರಿ ಒಟ್ಟು 1,17,927 ಮಂದಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಬಿಸಿಯೂಟ ನೌಕರರಿಗೆ ನೀಡುತ್ತಿರುವ ವೇತನದಲ್ಲಿ ಜೀವನ ನಡೆಸಲು ಕಷ್ಟಸಾಧ್ಯ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ನೌಕರರು ಹಲವು ಬಾರಿ ಹೋರಾಟ ನಡೆಸಿದ್ದಾರೆ. ಹೀಗಾಗಿ ಬಿಸಿಯೂಟ ನೌಕರರ ವೇತನದ ಪಾಲು ಹೆಚ್ಚಳ ಮಾಡುವಂತೆ  ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಶೇ.60 ಅನುದಾನ ನೀಡಲಿ. ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತದೆ. ವೇತನವನ್ನು ಕ್ರಮವಾಗಿ ಅಡುಗೆಯವರಿಗೆ 6000 ರೂ. ಹಾಗೂ ಸಹಾಯಕಿಯರಿಗೆ 5000 ರೂ. ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ  ಒತ್ತಾಯಿಸಿದ್ದಾರೆ.

Key words: bisiyuta- employees – Education Minister- Suresh Kumar – letter – Central govrnment