ಬಿಜೆಪಿಯಿಂದ ಕೊರೋನ ಲಸಿಕೆ ನೀಡುವಿಕೆಯ ದುರ್ಬಳಕೆ-ಮೈಸೂರು ಡಿಸಿಗೆ ಕಾಂಗ್ರೆಸ್ ವಕ್ತಾರರಿಂದ ದೂರು.

ಮೈಸೂರು,ಜೂನ್,23,2021(www.justkannada.in): “ಬಿಜೆಪಿ ಕೊರೋನ ಲಸಿಕೆ ನೀಡುವಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ  ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ದೂರು ನೀಡಿದ್ದಾರೆ.jk

ಈ ಕುರಿತು ಮಾತನಾಡಿರುವ ಹೆಚ್.ಎ ವೆಂಕಟೇಶ್, ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು, ಕಾರ್ಯಕರ್ತರನ್ನೂ ಒಳಗೊಂಡಂತೆ ,ಬಿಜೆಪಿಯ ಚಿಹ್ನೆಯನ್ನು ಕೂಡ ಬಳಸಿಕೊಂಡು ಕೊರೋನಾ ಸೋಂಕು ನಿರೋಧಕ ಲಸಿಕೆಯನ್ನು ಪಕ್ಷದ ಕೊಡುಗೆ ಎಂಬಂತೆ ಶ್ರೀಸಾಮಾನ್ಯರಿಗೆ ಲಸಿಕೆ ಹಾಕಿಸುತ್ತಿರುವುದು ಸರಿಯಾದ ಕ್ರಮವಲ್ಲ. ಲೋಕಸಭಾ ಸದಸ್ಯರು, ಶಾಸಕರು ಸೇರಿದಂತೆ ಹಲವರ ಭಾವಚಿತ್ರವನ್ನು ಕಸ ವಿಲೇವಾರಿ ವಾಹನಗಳಲ್ಲಿ ಅಳವಡಿಸಿ ಧ್ವನಿವರ್ಧಕದ ಮೂಲಕ ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಪ್ರಚಾರಗೊಳಿಸಲಾಗಿದೆ. ಸಂಕಷ್ಟದ ದಿನಗಳಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಹಾಗೆಯೇ  ತಾವು ವೈಯಕ್ತಿಕವಾಗಿ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿದರೆ ಸತ್ಯಾಂಶ ತಮಗೆ ತಿಳಿಯುತ್ತದೆ.  ಜನರ ತೆರಿಗೆ ಹಣದಿಂದ ನೀಡುತ್ತಿರುವ ಲಸಿಕೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮೈಸೂರು ಡಿಸಿಗೆ ಎಚ್.ಎ ವೆಂಕಟೇಶ್ ಆಗ್ರಹಿಸಿದ್ದಾರೆ.

Key words: Take action misuse – covid vaccine-congress-HA Venkatesh -Mysore -DC.