ಕೋವಿಡ್ ಹಿನ್ನೆಲೆ: ನಂಜನಗೂಡಿನ ಅದ್ಧೂರಿ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ಬ್ರೇಕ್.

ಮೈಸೂರು,ಜೂನ್,23,2021(www.justkannada.in): ಕೋವಿಡ್ ಹಾಗೂ ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆದಿರುವ ಹಿನ್ನೆಲೆ, ನಂಜನಗೂಡಿನ ಶ್ರೀಕಂಠೇಶ್ಚರ ದೇವಾಲಯದಲ್ಲಿ ನಡೆಯುವ ಅದ್ಧೂರಿ ಗಿರಿಜಾ ಕಲ್ಯಾಣ ಮಹೊತ್ಸವಕ್ಕೆ  ಬ್ರೇಕ್ ಹಾಕಲಾಗಿದೆ.

ನಂಜನಗೂಡಿನ ಶ್ರೀಕಂಠೇಶ್ಚರ ದೇವಾಲಯದಲ್ಲಿ ಜೂನ್‌ 26 ರಿಂದ ಜುಲೈ 3 ರವರೆಗೆ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯಬೇಕಿತ್ತು. ಆದರೆ ಕೊರೋನಾ ವ್ಯಾಪಕವಾಗಿ ಹರಡಿರುವ ಹಿನ್ನೆಲೆ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ  ಸಾರ್ವಜನಿಕರ ಪ್ರವೇಶಕ್ಕೆ‌ ನಿರ್ಬಂಧ ವಿಧಿಸಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಸಾಂಪ್ರದಾಯಿಕ ಆಚರಣೆಗೆ ದೇವಾಲಯದ ಸಿಬ್ಬಂದಿ, ಅರ್ಚಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸರಳ ಗಿರಿಜಾ ಕಲ್ಯಾಣ ಮಹೋತ್ಸವ ಆಚರಣೆಗೆ ಅನುಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನದಂತೆ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯಲಿದೆ.

Key words: mysore –DC-bagadi gowtham-nanjanagudu-girija kalyana mahotsav