ನಿಗದಿಪಡಿಸಿದ ಗುರಿಯಷ್ಟು ಕೋವಿಡ್ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳಿ- ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಸೂಚನೆ…

Promotion

ಬೆಂಗಳೂರು,ಆ,19,2020(www.justkannada.in): ನಿಗದಿತ ಗುರಿಗಿಂತ ಕಡಿಮೆ ಕೋವಿಡ್ ಟೆಸ್ಟ್ ಮಾಡುತ್ತಿರುವ ಹಿನ್ನೆಲೆ, ನಿಗದಿಪಡಿಸಿರುವ ಗುರಿಯಷ್ಟು ಕೊರೋನಾ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದರು.take-action-covid-test-specified-target-medical-education-minister-dr-k-sudhakar

ನಿಗದಿತ ಗುರಿಗಿಂತ ಕಡಿಮೆ ಕೋವಿಡ್ ಟೆಸ್ಟ್ ಗಳನ್ನು ಮಾಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಬುಧವಾರ ವಿಡಿಯೋ ಸಮಾಲೋಚನೆ ನಡೆಸಿದರು.

ಈ ವೇಳೆ ಈಗಾಗಲೇ ನೀಡಿರುವ ಗುರಿಯಂತೆ ಟೆಸ್ಟ್ ಗಳನ್ನು ನಡೆಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಸಂವಾದದ ವೇಳೆ ಕಾಲೇಜುಗಳ ಮುಖ್ಯಸ್ಥರು ನಿಗದಿತ ಗುರಿ ತಲುಪಲು ಎದುರಾಗಿರುವ ಅಡೆತಡೆಗಳ ಪ್ರಸ್ತಾಪಿಸಿದಾಗ, ಅವುಗಳನ್ನು ಬಗೆಹರಿಸುವುದಾಗಿಯೂ ಸಚಿವ ಸುಧಾಕರ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.take-action-covid-test-specified-target-medical-education-minister-dr-k-sudhakar

ಸಂವಾದದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೋವಿಡ್  ಟೆಸ್ಟ್ ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಶಾಲೀನಿ ರಜನೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Take action – covid test – specified target-Medical Education Minister -Dr K Sudhakar