ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುದ್ದಿ !

kannada t-shirts

ಬೆಂಗಳೂರು, ಏಪ್ರಿಲ್ 15, 2020 (www.justkannada.in):

ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಗಾರರಿಗೆ ಸಿಹಿ ಸುದ್ದಿ ಬಂದಿದ್ದು, ರೈತರ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಚಿವ ಡಾ. ನಾರಾಯಣ ಗೌಡ ಅವರಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಮಾರು 662 ಹೆಕ್ಟೇರ್ ಪ್ರದೇಶದಲ್ಲಿ ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆ ಬೆಳೆಗಾರರಿಗೆ ಅನುಕೂಲವಾಗಲಿದೆ.

15 ಸಾವಿರ ಟನ್ ನಷ್ಟು ದ್ರಾಕ್ಷಿ ಬೆಳೆಯಲಾಗುತ್ತೆ. ಮಾರಾಟವಾಗದೆ ಕಂಗಾಲಾಗಿದ್ದ ರೈತರು. ಈ ದ್ರಾಕ್ಷಿಯನ್ನ ಡಿಸ್ಟಿಲರಿಸ್‍ಗೆ ಬಳಸಲು ಚಿಂತನೆ ಮಾಡಲಾಗಿದೆ.

ಈ ಸಂಬಂಧ ಅಬಕಾರಿ ಸಚಿವರೊಂದಿಗೆ ಮಾತುಕತೆ

ವಿಕಾಸ ಸೌಧದಲ್ಲಿ ಅಬಕಾರಿ ಸಚಿವರೊಂದಿಗೆ ಸಭೆ ನಡೆಸಲಾಗಿದೆ. ಈ ಕುರಿತು ಅಬಕಾರಿ ಸಚಿವ ಡಾ. ನಾಗೇಶ್ ಅವರಲ್ಲಿ ಮನವಿ ಮಾಡಿದ್ದಾರೆ.

ನಾಳೆಯೇ ಅಧಿಕಾರಿಗಳ ಜೊತೆ ಸಭೆ ನಡೆಸುವ ಭರವಸೆ ನೀಡಿರುವ ಸಚಿವ ನಾಗೇಶ್. ತತ್‍ಕ್ಷಣವೇ ಕಂಪೆನಿ ಆರಂಭಿಸುವ ಬಗ್ಗೆ ಸಭೆ. ಡಿಸ್ಟಿಲರಿ ಕಂಪೆನಿಗಳ ಮುಖ್ಯಸ್ಥರೊಂದಿಗೂ ಮಾತುಕತೆ ಮಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸಂಬಂಧ ಅಂತಿಮ ತೀರ್ಮಾನ

website developers in mysore