ಮೈಸೂರು: ಪಶುಗಳಿಗೆ ಮೇವು ನೀಡಿದ ಆರ್ಟ್ ಆಫ್ ಲೀವಿಂಗ್, ವಿಜಯೇಂದ್ರ ಬಳಗ

ಮೈಸೂರು, ಏಪ್ರಿಲ್ 15, 2020 (www.justkannada.in):

ಕೊರೋನಾ ಲಾಕ್ ಡೌನ್ ನಿಂದ ಒಂದೆಡೆ ಜನರು ತತ್ತರಿಸಿದ್ರೆ, ಮತ್ತೊಂದೆಡೆ ಪ್ರಾಣಿಗಳು ಆಹಾರವಿಲ್ಲದೆ ಪರಿತಪಿಸುತ್ತಿದ್ದು, ಬಿ.ವೈ.ವಿಜಯೇಂದ್ರ ಅಭಿಮಾನಿಗಳು ಹಾಗೂ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ನವರು
ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ನಂಜುಮಳಿಗೆ, ಅಗ್ರಹಾರ, ಚಾಮುಂಡಿಪುರಂ ಸೇರಿದಂತೆ ಹಲವೆಡೆ ರಸ್ತೆ ಬದಿಯ ಬೀಡಾಡಿ ದನ, ಕರು ಹಾಗೂ ಹಸುಗಳಿಗೆ ಹಸಿ ಹುಲ್ಲು ನೀಡಿ ಹಸಿವಿನಿಂದ ಬಳಲುತ್ತಿರುವ ಜೀವ ಸಂಕುಲವನ್ನು ರಕ್ಷಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿಯ ರಾಜ್ಯ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ
ರಘು ಕೌಟಿಲ್ಯ ಅವರು ಮಾತನಾಡಿ, “ಈ ಸಂಕಷ್ಟದ ಸಮಯದಲ್ಲಿ ಮನುಷ್ಯರಿಗಷ್ಟೇ ಅಲ್ಲದೇ ಪ್ರಾಣಿಗಳು ಅದರಲ್ಲಿಯೂ ಗೋವುಗಳು ಮಾನವನ ಅವಿಭಾಜ್ಯ ಅಂಗವಾಗಿವೆ. ಗೋವುಗಳನ್ನು ಹಸಿವಿನಿಂದ ಇರಿಸುವುದು ಮನುಷ್ಯನಿಗೆ ಶ್ರೇಯಸ್ಸು ತರುವುದಿಲ್ಲ ಹಾಗಾಗಿ ಎಲ್ಲಾ ಗೋವುಗಳಿಗೂ ಮೇವು ಸಿಗುವಂತೆ ನೋಡಿಕೊಳ್ಳಬೇಕು.
ಹಾಗೆಯೇ ಪ್ರತಿ ಬೇಸಿಗೆಯಲ್ಲಿ ಅವಶ್ಯಕತೆ ಇರುವ ಕಡೆ ಸರ್ಕಾರ ಮೇವು ಬ್ಯಾಂಕ್ ಸ್ಥಾಪಿಸುತ್ತಿತ್ತು. ಅದರೆ ಈ ಬಾರಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪಶುಗಳಿಗೂ ಹಲವೆಡೆ ಮೇವಿಗೆ ತೊಂದರೆಯಾಗಿದೆ. ಇದನ್ನ ಮನಗಂಡು ನಮ್ಮ ಸಂಘಟನೆಗಳು ಮೇವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು

ಇತ್ತೀಚೆಗೆ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಕೂಡ ತಮ್ಮ ಮನೆಯ ಮುಂದೆ ಬೆಕ್ಕಿಗೆ ಸ್ವತಃ ಆಹಾರ ನೀಡುವ ಮೂಲಕ ಜನರಿಗೆ ಸಂದೇಶ ನೀಡಿದ್ದರು. ಅದರಿಂದ ಪ್ರೇರಣೆ ಪಡೆದು ಇಂದು ಹಸುಗಳಿಗೆ ಆಹಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಆರ್ಟ್ ಆಫ್ ಲೀವಿಂಗ್ ನ ಅಪೂರ್ವ ಸುರೇಶ್, ರವಿ, ವಿಕ್ರಮ್ ಅಯ್ಯಂಗಾರ್, ಗೋಪರಿವಾರದ ರಾಕೇಶ್ ಭಟ್, ಅಜಯ್ ಶಾಸ್ತ್ರಿ, ಶ್ರೀನಿವಾಸಪ್ರಸಾದ್, ಚಕ್ರಪಾಣಿ,ಸುಚೇಂದ್ರ , ಹಾಜರಿದ್ದರು

ಇದೇ ವೇಳೆ ಉತ್ತನಹಳ್ಳಿಯ ಭಾರತೀ ಯೋಗಧಾಮದ ಗೋಶಾಲೆಗೂ ಮೇವು ವಿತರಿಸಲಾಯಿತು.