ಅನರ್ಹ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್…

Promotion

ನವದೆಹಲಿ,ಸೆ,25,2019(www.justkannada.in): ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್   ನೀಡಿದ್ದ ಆದೇಶವನ್ನ ಪ್ರಶ್ನಿಸಿ  17 ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್‌.ವಿ ರಮಣ ಅವರ ನೇತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಡೆಸಿನಾಳೆಗೆ ಮುಂದೂಡಿದೆ ಇಂದು ಅನರ್ಹ ಶಾಸಕರ ಪರ  ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ  ಸ್ಪೀಕರ್ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿದರು.

ಬಳಿಕ ಕಾಂಗ್ರೆಸ್‌ ಪರ ವಕೀಲರು ನಾಳೆ ಪ್ರತಿವಾದವನ್ನು ಸಲ್ಲಿಸುತ್ತೇವೆ  ಎಂದು ಹೇಳಿದರು. ಹೀಗಾಗಿ  ಸುಪ್ರೀಂಕೋರ್ಟ್ ನಾಳೆಗೆ ವಿಚಾರರಣೆಯನ್ನು ಮುಂದೂಡಿದೆ.

Key words: Supreme Court –postpones- hearing –disqualified MLA-petition